ನವದೆಹಲಿ: ಭಾರತ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ ಆರಂಭಿಸಿದಾಗಲಿಂದಲೂ ಸುಳ್ಳು ಸುದ್ದಿಗಳು ಹಬ್ಬುತ್ತಲೇ ಇವೆ.
ಇದೀಗ ಭಾರತೀಯ ವಾಯುಪಡೆಯ ಮಹಿಳಾ ಪೈಲಟ್ ಶಿವಾನಿ ಸಿಂಗ್ ಅವರು ಫೈಟರ್ ಜೆಟ್‌ನಿಂದ ಪಾಕಿಸ್ತಾನದ ಭಾಗದಲ್ಲಿ ಜಿಗಿದಿದ್ದು, ಅವರನ್ನು ಸೆರೆಹಿಡಿಯಲಾಗಿದೆ, ಅಭಿನಂದನ್ ಅವರ ಬಳಿಕ ಮತ್ತೊಬ್ಬರ ಸೆರೆ ಎಂದು ವಿಡಿಯೊವೊಂದನ್ನು ಹಂಚಿಕೊಳ್ಳಲಾಗಿದೆ.
ಆದರೆ ಪಿಬಿಐ ಫ್ಯಾಕ್ಟ್ ಚೆಕ್ ವೇಳೆ ಇದು ಸುಳ್ಳು ಎಂದು ತಿಳಿದುಬಂದಿದೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಪಿಬಿಐ, ‘ಭಾರತೀಯ ವಾಯುಪಡೆಯ ಮಹಿಳಾ ಪೈಲಟ್ ಅನ್ನು ಯಾರೂ ಸೆರೆಹಿಡಿದಿಲ್ಲ. ಮಹಿಳಾ ಪೈಲಟ್, ಸ್ಕ್ವಾಡ್ರನ್ ಲೀಡರ್ ಶಿವಾನಿ ಸಿಂಗ್ ಅವರನ್ನು ಪಾಕಿಸ್ತಾನದಲ್ಲಿ ಸೆರೆಹಿಡಿಯಲಾಗಿದೆ ಎಂದು ಪಾಕಿಸ್ತಾನ ಪರ ಸಾಮಾಜಿಕ ಮಾಧ್ಯಮವು ವರದಿ ಮಾಡುತ್ತಿದೆ. ಇದು ಸುಳ್ಳು. ಅವರು ಸುರಕ್ಷಿತವಾಗಿದ್ದಾರೆ’ ಎಂದು ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.