ADVERTISEMENT

ಫ್ಯಾಕ್ಟ್‌ಚೆಕ್ | ಕೇಂದ್ರ ಸರ್ಕಾರ ಕೋವಿಡ್‌–19 ರೋಗಿಗೆ ₹ 3 ಲಕ್ಷ ನೀಡುತ್ತಿದೆಯಾ?

​ಪ್ರಜಾವಾಣಿ ವಾರ್ತೆ
Published 12 ಮೇ 2020, 2:55 IST
Last Updated 12 ಮೇ 2020, 2:55 IST
ಫ್ಯಾಕ್ಟ್‌ ಚೆಕ್
ಫ್ಯಾಕ್ಟ್‌ ಚೆಕ್   

ಕೋವಿಡ್‌–19 ರೋಗಿಗಳ ಆರೈಕೆಗಾಗಿ ಕೇಂದ್ರ ಸರ್ಕಾರವು ಪ್ರತಿಯೊಬ್ಬ ರೋಗಿಗೆ ₹ 3 ಲಕ್ಷದಂತೆ ರಾಜ್ಯ ಸರ್ಕಾರಗಳಿಗೆ ಹಣ ನೀಡುತ್ತಿದೆ ಎಂಬ ಮಾಹಿತಿಯುಳ್ಳ ಧ್ವನಿ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರಿ ಸದ್ದು ಮಾಡಿದೆ.

ಕೇಂದ್ರ ಸರ್ಕಾರವು ಈ ಸಂಬಂಧ ಸ್ಪಷ್ಟನೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಸಂಪೂರ್ಣ ಸುಳ್ಳು ಎಂದು ತಿಳಿಸಿದೆ. ಸರ್ಕಾರದ ಅಧಿಕೃತ ಟ್ವಿಟರ್‌ ಖಾತೆಯಾದ @mygovindia ಮೂಲಕವೂ ಈ ಸಂಬಂಧ ಸ್ಪಷ್ಟನೆ ನೀಡಲಾಗಿದೆ. ‘ಸರಿಯಾದ ಮಾಹಿತಿ ಹೊಂದಿ, ಸುರಕ್ಷಿತವಾಗಿರಿ, ಪ್ರತಿ ರೋಗಿಯ ಆರೈಕೆಗೆ ಧನಸಹಾಯ ಮಾಡುವ ಮಾಹಿತಿಯು ಶುದ್ಧ ಸುಳ್ಳು’ ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT