ADVERTISEMENT

ಪಿಒಕೆ ಜನರು ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನುವುದು ಸುಳ್ಳು ಸುದ್ದಿ

ಫ್ಯಾಕ್ಟ್ ಚೆಕ್
Published 28 ಮೇ 2024, 1:04 IST
Last Updated 28 ಮೇ 2024, 1:04 IST
   

‘ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಕುರಿಗಾಹಿ ಸಮುದಾಯದವರು ಹಿಂದೂಸ್ತಾನಕ್ಕೆ ಮತ್ತು ನಮ್ಮ ಸೇನೆಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. 70 ವರ್ಷಗಳಲ್ಲಿ ಈ ರೀತಿ ಆಗಲು ಸಾಧ್ಯವಿರಲಿಲ್ಲ. ಆದರೆ, ಈಗ ಆರಾಮವಾಗಿ ಸಂಭವಿಸುತ್ತಿದೆ. ಜೈ ಹಿಂದ್‌’ ಎನ್ನುವ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಹಂಚಿಕೆಯಾಗುತ್ತಿದೆ. ಆದರೆ, ಇದು ಸುಳ್ಳು ಸುದ್ದಿ.

ಇದೇ ವಿಡಿಯೊವು ಕಳೆದ ವರ್ಷವೂ ಹಂಚಿಕೆಯಾಗಿತ್ತು. ಬಿಜೆಪಿಯ ಹಲವು ನಾಯಕರು ಇದೇ ಅಭಿಪ್ರಾಯದೊಂದಿಗೆ ವಿಡಿಯೊವನ್ನು ಹಂಚಿಕೊಂಡಿದ್ದರು. ಆದರೆ, ಇದು ಕಾಶ್ಮೀರದ ಬಾರಾಮುಲ್ಲಾದಲ್ಲಿ ನಡೆದ ಘಟನೆ. ಪ್ರಬಲ ಎರಡು ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಮೀಸಲಾತಿ ನೀಡಲಾಗಿತ್ತು. ಇದರ ವಿರುದ್ಧ ಗುಜ್ಜರ್‌ ಹಾಗೂ ಕುರಿಗಾಹಿ ಬುಡಕಟ್ಟು ಸಮುದಾಯಗಳು ತೀವ್ರವಾಗಿ ಎರಡು ವರ್ಷಗಳ ಅವಧಿಯ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಭಾರತದ ಸ್ವಾತಂತ್ರ್ಯ ದಿನದ ಮರು ದಿನ ಪ್ರತಿಭಟನನಿರತರು, ಭಾರತ ಸಂವಿಧಾನ ಮತ್ತು ಸೇನೆಯನ್ನು ಗೌರವಿಸುತ್ತೇವೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದರು. ಪ್ರತಿಜ್ಞೆ ಬೋಧಿಸಿದ್ದ ರಫೀಕ್‌ ಭಲೋಟೆ ಅವರು ಇದನ್ನು ದೃಢಪಡಿಸಿದ್ದಾರೆ ಎಂದು ಬೂಮ್‌ಲೈವ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT