ADVERTISEMENT

ಜಾರ್ಖಂಡ್; ಪಂಚಾಯಿತಿ ಜಯದ ಸಂಭ್ರಮಾಚರಣೆ ವೇಳೆ 'ಪಾಕಿಸ್ತಾನ ಜಿಂದಾಬಾದ್‌'?

​ಪ್ರಜಾವಾಣಿ ವಾರ್ತೆ
Published 25 ಮೇ 2022, 19:30 IST
Last Updated 25 ಮೇ 2022, 19:30 IST
   

ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಹೊಸದಾಗಿ ಆಯ್ಕೆ ಆದ ಪಂಚಾಯಿತಿ ಸಮಿತಿ ಸದಸ್ಯರೊಬ್ಬರ ಗೆಲುವನ್ನು ಅವರ ಬೆಂಬಲಿಗರು ಸಂಭ್ರಮಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ‘ಪಂಚಾಯಿತಿ ಸದಸ್ಯರೊಬ್ಬರ ಗೆಲುವಿನ ಸಂಭ್ರಮಾಚರಣೆಯಲ್ಲಿ ಪಾಕಿಸ್ತಾನ ಜಿಂದಾಬಾದ್‌ ಎಂಬ ಘೋಷಣೆ ಕೂಗಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದಾಗಿ ಆಯ್ಕೆ ಆದ ಪಂಚಾಯಿತಿ ಸದಸ್ಯ ಮತ್ತು ಇತರ 62 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ’ ಎಂದು ದೇಶದ ಪ್ರಮುಖ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ. ಬಿಜೆಪಿಯ ಹಲವು ಮುಖಂಡರು ಈ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೊ ಜೊತೆ ನೀಡಲಾಗಿರುವ ವಿವರ ಸುಳ್ಳು ಎಂದು ‘ಆಲ್ಟ್‌ನ್ಯೂಸ್‌’ ವೇದಿಕೆ ವರದಿ ಮಾಡಿದೆ. ಪಂಚಾಯಿತಿ ಚುನಾವಣೆ ಗೆದ್ದ ಅಮೀನ ಅನ್ಸಾರಿ ಅವರ ಮಗ ಶಮೀಮ್‌ ಅನ್ಸಾರಿ ಅವರನ್ನು ಖುದ್ದಾಗಿ ಸಂಪರ್ಕಿಸಿ ಘಟನೆಗೆ ಸಂಬಂಧಿಸಿದ ಹಲವಾರು ವಿಡಿಯೊಗಳನ್ನು ತರಿಸಿಕೊಂಡೆವು. ವಿಡಿಯೊಗಳಲ್ಲಿ ‘ಛೋಟಿ ಛಾ ಜಿಂದಾಬಾದ್‌’ ಎಂಬ ಘೋಷಣೆ ಕೇಳುತ್ತದೆ. ಅದರ ಜೊತೆ ‘ನಿಜಮ್‌ ಅನ್ಸಾರಿ ಜಿಂದಾಬಾದ್‌’, ‘ಜಗದೀಶ್‌ ಸಾಬ್‌ ಜಿಂದಾಬಾದ್‌’ ಮತ್ತು ‘ಶಮೀಮ್‌ ಅನ್ಸಾರಿ ಜಿಂದಾಬಾದ್‌’ ಎಂಬ ಘೋಷಣೆಗಳೂ ಕೇಳುತ್ತವೆ. ‘ಪಾಕಿಸ್ತಾನ ಜಿಂದಾಬಾದ್‌’ ಎಂಬ ಘೋಷಣೆ ಯಾವ ವಿಡಿಯೊದಲ್ಲೂ ಕೇಳುವುದಿಲ್ಲ. ಆದರೆ 62 ಜನರ ವಿರುದ್ಧ ಪ್ರಕರಣ ದಾಖಲಾಗಿರುವುದು ನಿಜ ಎಂದು ಆಲ್ಟ್‌ ನ್ಯೂಸ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT