ADVERTISEMENT

Fact check: ಶಿವಲಿಂಗದ ಮೇಲೆ ಮೂತ್ರ ಮಾಡಿದರೇ ಮುಸ್ಲಿಂ ಯುವಕರು?

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 19:30 IST
Last Updated 17 ಮಾರ್ಚ್ 2021, 19:30 IST
ಫ್ಯಾಕ್ಟ್‌ಚೆಕ್‌
ಫ್ಯಾಕ್ಟ್‌ಚೆಕ್‌   

ದೆಹಲಿ ಬಿಜೆಪಿ ಘಟಕದ ಮುಖಂಡ ಕಪಿಲ್ ಮಿಶ್ರಾ ಅವರು ಮಂಗಳವಾರ ಟ್ವೀಟ್‌ ಮಾಡಿದ್ದು, ಮುಸ್ಲಿಂ ಯುವಕರು ಶಿವಲಿಂಗದ ಮೇಲೆ ಮೂತ್ರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜತೆಯಲ್ಲಿ ಒಂದು ವಿಡಿಯೊವನ್ನೂ ಹಂಚಿಕೊಂಡಿದ್ದಾರೆ. ಇಬ್ಬರು ಯುವಕರು ದೇವಾಲಯವೊಂದರಲ್ಲಿ ಇರುವ ಮೂರ್ತಿಗಳು ಮತ್ತು ಶಿವಲಿಂಗದ ಮೇಲೆ ಮೂತ್ರ ಮಾಡುತ್ತಿರುವ ದೃಶ್ಯಗಳು ಈ ವಿಡಿಯೊದಲ್ಲಿ ಇದೆ. ವಿಡಿಯೊದಲ್ಲಿ ಇರುವ ಯುವಕರು ಮುಸ್ಲಿಮರು ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ. ಈ ಟ್ವೀಟ್‌ ಅನ್ನು 60,000ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಅಲ್ಲದೆ, 12,000ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಮಾಡಲಾಗಿದೆ.

ಇದು ಹಳೆಯ ವಿಡಿಯೊ ಎಂದು ದಿ ಲಾಜಿಕಲ್ ಇಂಡಿಯನ್ ಮತ್ತು ಆಲ್ಟ್‌ನ್ಯೂಸ್‌ ಫ್ಯಾಕ್ಟ್‌ಚೆಕ್ ಪ್ರಕಟಿಸಿವೆ. ಈ ವಿಡಿಯೊವನ್ನು 2018ರಲ್ಲಿ ಯುಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿದೆ. ಇದು ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಗ್ರಾಮವೊಂದರ ದೇವಾಲಯದಲ್ಲಿ ಚಿತ್ರೀಕರಿಸಿದ ವಿಡಿಯೊ. ವಿಡಿಯೊದಲ್ಲಿ ಇರುವ ಯುವಕರನ್ನು ರಮೇಶ್ ಮತ್ತು ಆನಂದ್ ರಮೇಶ್ ಎಂದು ಗುರುತಿಸಲಾಗಿದೆ. 2018ರಲ್ಲೇ ಆಂಧ್ರಪ್ರದೇಶ ಪೊಲೀಸರು ಯುವಕರನ್ನು ಬಂಧಿಸಿದ್ದಾರೆ. ಅವರಿಗೆ ಶಿಕ್ಷೆಯಾಗಿದೆ. ಇಬ್ಬರೂ ಯುವಕರು ಕ್ರೈಸ್ತ ಸಮುದಾಯಕ್ಕೆ ಸೇರಿದವರು ಎಂದು ವಿಶಾಖಪಟ್ಟಣ ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ ಬಿಜೆಪಿಯ ಮುಖಂಡ ಹಳೆಯ ವಿಡಿಯೊವನ್ನು ಈಗಿನದ್ದು ಎಂದು ಹಂಚಿಕೊಳ್ಳುತ್ತಿದ್ದಾರೆ ಎಂದು ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT