ADVERTISEMENT

Fact Chek: ಮೋದಿ ಐಎಎಸ್ ಅಧಿಕಾರಿ ಆರತಿ ಡೋಗ್ರಾ ಕಾಲಿಗೆ ನಮಸ್ಕರಿಸಿದ್ದು ನಿಜವೇ?

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 19:31 IST
Last Updated 21 ಡಿಸೆಂಬರ್ 2021, 19:31 IST
   

ಪ್ರಧಾನಿ ನರೇಂದ್ರ ಮೋದಿ ಅವರು ಕುಬ್ಜ ಮಹಿಳೆಯೊಬ್ಬರ ನಮಸ್ಕರಿಸಿದ ಚಿತ್ರವನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಹೆಚ್ಚಾಗಿ ಹಂಚಿಕೊಳ್ಳುತ್ತಿದ್ದಾರೆ. ‘ಇವರು 2006ನೇ ಬ್ಯಾಚಿನ ಐಎಎಸ್ ಅಧಿಕಾರಿ ಆರತಿ ಡೋಗ್ರಾ. ದೈಹಿಕವಾಗಿ ಕುಳ್ಳಗಿದ್ದರೂ, ಅವರ ಸಾಧನೆ ಅಮೋಘ. ಇತ್ತೀಚೆಗೆ ಉದ್ಘಾಟನೆಯಾದ ಕಾಶಿ ಮಂದಿರದ ವಾಸ್ತುಶಿಲ್ಪಿ ಇವರೇ. ಇವರ ಸಾಧನೆಯನ್ನು ಗೌರವಿಸಿ ಪ್ರಧಾನಿಯವರು ಅವರ ಕಾಲಿಗೆ ನಮಸ್ಕರಿಸಿದ್ದಾರೆ’ ಎಂಬುದಾಗಿ ಚರ್ಚೆಯಾಗುತ್ತಿದೆ.

ಮೋದಿ ಅವರು ನಮಸ್ಕರಿಸಿದ ಮಹಿಳೆ ಆರತಿ ಡೊಗ್ರಾ ಅಲ್ಲ. ಅವರ ಹೆಸರು ಶಿಖಾ ರಸ್ತೋಗಿ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ. ವಾರಾಣಸಿ ಸಮೀಪದ ಸಿಗ್ರಾದ ಶಿಖಾ ಅವರು ಕಾಶಿ ವಿಶ್ವನಾಥ ಧಾಮದಲ್ಲಿ ಪ್ರಧಾನಿ ಕಾಲಿಗೆ ನಮಸ್ಕರಿಸಲು ಮುಂದಾದರು. ಆದರೆ, ಪ್ರಧಾನಿಯೇ ಮಹಿಳೆಯ ಕಾಲಿಗೆ ನಮಸ್ಕರಿಸಿದರು. ಡೊಗ್ರಾ ಅವರು ಕಾಶಿಧಾಮದ ವಾಸ್ತುಶಿಲ್ಪಿ ಅಲ್ಲ. ಡೊಗ್ರಾ ಅವರು ರಾಜಸ್ಥಾನದ ಸಿಎಂಒ ಕಚೇರಿಯ ವಿಶೇಷಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಕಾಶಿಧಾಮದ ವಿನ್ಯಾಸ ಮಾಡಿದವರು ಬಿಮಲ್ ಪಟೇಲ್ ಎಂದು ವೆಬ್‌ಸೈಟ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT