ADVERTISEMENT

ಪ್ರಧಾನಿ ನರೇಂದ್ರ ಮೋದಿ ಸಹೋದರ ಆಟೊ ಚಾಲಕನೇ?

ಫ್ಯಾಕ್ಟ್‌ ಚೆಕ್

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 10:48 IST
Last Updated 8 ಜೂನ್ 2019, 10:48 IST
   

ಬೆಂಗಳೂರು:‘ಅವರ ಹಿರಿಯ ಸಹೋದರ ಭಾರತದ ಪ್ರಧಾನ ಮಂತ್ರಿ. ಅವರ ಕಿರಿಯ ಸಹೋದರ ಆಟೊ ಚಾಲಕ. ನಮ್ಮ ಪ್ರಧಾನಿ ಧನ್ಯರು.’ ಹೀಗೊಂದು ಸಂದೇಶಬಿಜೆಪಿ–ನವದೆಹಲಿಎಂಬ ಫೇಸ್‌ಬುಕ್ ಪುಟದಲ್ಲಿ ಪ್ರಕಟವಾಗಿದೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಹೋಲುವ ಮುಖಚರ್ಯೆಯಿರುವ ಆಟೊ ಚಾಲಕರೊಬ್ಬರ ಚಿತ್ರವಿದೆ.

ಈ ಸಂದೇಶ ಈವರೆಗೆ 460ಕ್ಕೂ ಹೆಚ್ಚು ಶೇರ್ ಆಗಿದೆ. ಇದೇ ಸಂದೇಶ ನರೇಂದ್ರ ಮೋದಿಎಂಬ ಫೇಸ್‌ಬುಕ್ ಪುಟದಲ್ಲಿಯೂ ಪ್ರಕಟವಾಗಿದ್ದು, 249ರಷ್ಟು ಶೇರ್ ಆಗಿದೆ. ಈ ಸಂದೇಶವನ್ನು ಅನೇಕ ಮಂದಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಟ್ವಿಟರ್‌ನಲ್ಲಿಯೂ ಶೇರ್ ಆಗಿದೆ.

ಮೋದಿ ಸಹೋದರ ಅಲ್ಲ!

ADVERTISEMENT

ಮೋದಿ ಅವರಂತೆಯೇ ಕಾಣುವ ಈ ವ್ಯಕ್ತಿ ಅವರ ಸಹೋದರನಲ್ಲ. ಈ ಫೋಟೊ 2016ರಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದನ್ನು ನವಭಾರತ್ ಟೈಮ್ಸ್‌ಆಗಲೇಫ್ಯಾಕ್ಟ್‌ ಚೆಕ್ ನಡೆಸಿಬಯಲಿಗೆಳೆದಿತ್ತು.

ಫೋಟೊದಲ್ಲಿ ಕಾಣುವ ವ್ಯಕ್ತಿಯ ಹೆಸರುಶೇಖ್ ಆಯುಬ್. ಇವರು ತೆಲಂಗಾಣದ ಅದಿಲಾಬಾದ್‌ನಲ್ಲಿ ಆಟೊ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದುಆಲ್ಟ್‌ನ್ಯೂಸ್ವರದಿ ಮಾಡಿದೆ.

ಪ್ರಧಾನಿ ಮೋದಿ ಅವರ ಸಹೋರರು ಯಾರೂ ಆಟೊ ಚಾಲಕರಲ್ಲ ಎಂಬುದೂ ಗಮನಾರ್ಹ. ಮೋದಿಗೆ ಸೋಮ್‌ಭಾಯಿ ಮೋದಿ, ಅಮೃತ್ ಮೋದಿ ಮತ್ತು ಪ್ರಹ್ಲಾದ್ ಮೋದಿ ಹೆಸರಿನ ಮೂವರು ಸಹೋದರರಿದ್ದಾರೆ.ಇಂಡಿಯಾ ಟುಡೆಲೇಖನವೊಂದರ ಪ್ರಕಾರ, ಸೋಮ್‌ಭಾಯಿ ಅವರು ಗುಜರಾತ್‌ನ ವಡ್‌ನಗರದಲ್ಲಿ ವೃದ್ಧಾಶ್ರಮ ನಡೆಸುತ್ತಿದ್ದಾರೆ. ಅಮೃತ್ ಮೋದಿ ಅವರು ಖಾಸಗಿ ಕಂಪನಿಯೊಂದರಲ್ಲಿ ಫಿಟ್ಟರ್ ಆಗಿ ಕೆಲಸ ಮಾಡುತ್ತಿದ್ದರೆ ಕಿರಿಯ ಸಹೋದರ ಪ್ರಹ್ಲಾದ್ ಮೋದಿ ಅವರು ಅಂಗಡಿಯೊಂದರ ಮಾಲೀಕರಾಗಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.