ADVERTISEMENT

ಫ್ಯಾಕ್ಟ್‌ ಚೆಕ್‌: ಪ್ರಿಯಾಂಕಾ ಗಾಂಧಿ ಸೀರೆಯಲ್ಲಿ ದೇವಸ್ಥಾನ ಗಂಟೆ ಬಾರಿಸುವ ಚಿತ್ರ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2022, 19:31 IST
Last Updated 2 ಫೆಬ್ರುವರಿ 2022, 19:31 IST
ಫ್ಯಾಕ್ಟ್‌ ಚೆಕ್‌
ಫ್ಯಾಕ್ಟ್‌ ಚೆಕ್‌   

ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೆಂಪು ಸೀರೆಯುಟ್ಟು ದೇವಸ್ಥಾನದ ಗಂಟೆ ಬಾರಿಸುತ್ತಿರುವ ಚಿತ್ರವೊಂದು ವೈರಲ್‌ ಆಗುತ್ತಿದೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪ್ರಚಾರದ ಮುಂಚೂಣಿ ವಹಿಸಿರುವ ಪ್ರಿಯಾಂಕಾ ಗಾಂಧಿ ಅವರು, ಅವರ ಅಜ್ಜಿ ಇಂದಿರಾ ಗಾಂಧಿ ಅವರ ಸೀರೆಯುಟ್ಟು ಜನರ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಚಿತ್ರವನ್ನು ಬಿಂಬಿಸಲಾಗಿದೆ. ‘ಉತ್ತರ ಪ್ರದೇಶದ ಚುನಾವಣೆ ಬಂದಾಗ ಅಜ್ಜಿಯ ಸೀರೆಯೂ ಕಪಾಟಿನಿಂದ ಹೊರಬರುತ್ತದೆ. ಇದರರ್ಥ ಏನು ಎಂಬುದು ನಿಮಗೆ ತಿಳಿಯುತ್ತದೆ’ ಚಿತ್ರಕ್ಕೆ ಅಡಿಬರಹ ನೀಡಲಾಗಿದೆ.

2009ರ ಲೋಕಸಭೆ ಚುನಾವಣೆಗೂ ಮೊದಲು ತೆಗೆದಿರುವ ಚಿತ್ರ ಇದು ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ತಮ್ಮ ಸಹೋದರ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಪರ ಪ್ರಿಯಾಂಕಾ ಅವರುಅಮೇಠಿಯಲ್ಲಿ ಪ್ರಚಾರ ನಡೆಸಿದ್ದರು. ಆ ವೇಳೆ ಅವರು ದುರ್ಗಾ ದೇವಿ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದರು. ಈ ಚಿತ್ರವನ್ನು 2020ರಲ್ಲಿ ನಡೆದ ಬಿಹಾರ ವಿಧಾನಸಭೆ ಚುನಾವಣೆ ವೇಳೆಯೂ ಸುಳ್ಳು ಮಾಹಿತಿಯೊಂದಿಗೆ ಬಳಸಲಾಗಿತ್ತು ಎಂದು ಇಂಡಿಯಾ ಟುಡೆ ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT