ರಾಹುಲ್ ಗಾಂಧಿ ಅವರ ಚಿತ್ರದೊಂದಿಗೆ ಅವರದ್ದು ಎನ್ನಲಾದ ಹೇಳಿಕೆಯ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಆರು–ಏಳು ಬಾಲಕರು ನನ್ನ ಬಳಿ ಬಂದು, ‘ವೋಟ್ ಚೋರ್, ಗಡ್ಡಿ ಚೋಡ್’ ಎಂದು ಕಿವಿಯಲ್ಲಿ ಉಸುರಿದರು. ಏಕೆಂದರೆ, ಬಿಹಾರದಲ್ಲಿ ಮತದಾರರ ಪಟ್ಟಿಯಿಂದ ಅವರ ಹೆಸರುಗಳನ್ನು ಕೈಬಿಡಲಾಗಿದೆ’ ಎಂದು ರಾಹುಲ್ ಹೇಳಿದ್ದಾರೆ ಎಂಬುದಾಗಿ ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ರಾಹುಲ್ ಗಾಂಧಿ ಅವರು ಬಿಹಾರದ ಅರಾರಿಯಾದಲ್ಲಿ ಆಗಸ್ಟ್ 24ರಂದು ಪತ್ರಿಕಾಗೋಷ್ಠಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಬಗ್ಗೆ ಮಾತನಾಡಿದ್ದರು. ಈ ಹಿಂದೆ ಐದು–ಆರು ಬಾರಿ ಮತದಾನ ಮಾಡಿದವರ ಹೆಸರುಗಳನ್ನೂ ಈ ಬಾರಿ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಹೇಳಿದ್ದರು. ಮಾತು ಮುಂದುವರಿಸಿದ್ದ ಅವರು, ‘ಈಗ ಮಕ್ಕಳೂ ನನ್ನ ಬಳಿ ಬರುತ್ತಿದ್ದಾರೆ. ವೋಟ್ ಚೋರ್, ಗಡ್ಡಿ ಚೋಡ್ ಎಂದು ಕಿವಿಯಲ್ಲಿ ಹೇಳುತ್ತಿದ್ದಾರೆ. ಹೀಗೆ ಹೇಳುತ್ತಿರುವುದು ವಯಸ್ಕರಲ್ಲ, ಮಕ್ಕಳು..’ ಎಂದಿದ್ದರು. ಈ ಎರಡು ಭಿನ್ನ ಹೇಳಿಕೆಗಳನ್ನು ಬೆಸೆದು, ಅದರ ಮೂಲಕ ಸುಳ್ಳು ಪ್ರತಿಪಾದನೆ ಮಾಡಲಾಗುತ್ತಿದೆ ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.