ADVERTISEMENT

Fact Check: ಕಪ್ಪು ಟೋಪಿಯ ಹಂತಕ ಎಲ್ಲಿದ್ದಾನೆ?

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 20:15 IST
Last Updated 14 ನವೆಂಬರ್ 2022, 20:15 IST
   

ಮುಂಬೈನ ರಸ್ತೆಯೊಂದರಲ್ಲಿ ಕಾರಿನಿಂದ ಇಳಿದು ಬರುವ ಮಹಿಳೆಯನ್ನು ಹಿಂದಿನಿಂದ ಹಿಡಿದುಕೊಳ್ಳುವ ಆಗಂತುಕನೊಬ್ಬ, ಆಕೆಯ ಕುತ್ತಿಗೆಗೆ ಚಾಕುವಿನಿಂದ ಇರಿಯುತ್ತಾನೆ. ಕೆಲವು ಬಾರಿ ಚುಚ್ಚಿದ ಬಳಿಕ ಆಕೆ ನೆಲಕ್ಕೆ ಉರುಳುತ್ತಾಳೆ. ಆಕೆಯನ್ನು ಕಾರು ಪಾರ್ಕಿಂಗ್ ಜಾಗಕ್ಕೆ ಆತ ಎಳೆದುಹಾಕುತ್ತಾನೆ. ಈ ದೃಶ್ಯವಿರುವ ಸಿಸಿಟಿವಿ ಕ್ಯಾಮರಾ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಸಂಚಲನ ಸೃಷ್ಟಿಸಿದೆ.

#HatmanKillerInMumbai ಎಂಬ ಹ್ಯಾಷ್‌ಟ್ಯಾಗ್‌ನಡಿ ‘ಕಪ್ಪು ಟೋಪಿಯ ಹಂತಕ ಮುಂಬೈನ ಅಂಧೇರಿಯಲ್ಲಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ’ ಎಂದು ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಆದರೆ ಇದು ನಿಜವಲ್ಲ.

ಮುಂಬೈನಲ್ಲಿ ಇಂತಹ ಘಟನೆ ನಡೆದಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ ಎಂದು ಮುಂಬೈ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ ಎಂದು ‘ಆಲ್ಟ್‌ ನ್ಯೂಸ್’ ವರದಿ ಮಾಡಿದೆ. ಇದನ್ನು ನಂಬಬೇಡಿ, ಇಂತಹ ಸುದ್ದಿಯಿಂದ ದಿಗಿಲಿಗೆ ಒಳಗಾಗಬೇಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ವಿಡಿಯೊದ ಕೆಳಭಾಗದಲ್ಲಿ ‘ಮಾರಿಚ್’ ಎಂಬ ಹೆಸರಿದ್ದು, ನಟ, ನಿರ್ಮಾಪಕ ತುಷಾರ್ ಕಪೂರ್ ಅವರ ಮುಂಬರುವ ಚಿತ್ರದ ಹೆಸರಿದು ಎಂದು ಹೇಳಲಾಗಿದೆ. ಚಿತ್ರದ ಪ್ರಚಾರಕ್ಕೆ ಇಂತಹ ವಿಧಾನವನ್ನು ಅನುಸರಿಸಿರುವ ಬಗ್ಗೆ ಸಾಮಾಜಿಕ ಜಾಲತಾಣ ಬಳಕೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ‘ಮಾರಿಚ್’ ಚಿತ್ರತಂಡದಿಂದ ಪ್ರತಿಕ್ರಿಯೆ ಸದ್ಯಕ್ಕೆ ಲಭ್ಯವಾಗಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.