ADVERTISEMENT

Factcheck: ಕೊಹ್ಲಿ, ಶರ್ಮಾ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದು ಸುಳ್ಳು ಸುದ್ದಿ

ಪಿಟಿಐ
Published 26 ಆಗಸ್ಟ್ 2025, 0:58 IST
Last Updated 26 ಆಗಸ್ಟ್ 2025, 0:58 IST
<div class="paragraphs"><p>Factcheck...</p></div>

Factcheck...

   

ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯ (ಐಸಿಸಿ) ಏಕದಿನ ರ್‍ಯಾಂಕಿಂಗ್ ಪಟ್ಟಿಯ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅವುಗಳಲ್ಲಿ ಭಾರತದ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಹೆಸರುಗಳು ಇಲ್ಲ. ಇದು ಕೊಹ್ಲಿ ಮತ್ತು ಶರ್ಮಾ ಇಬ್ಬರೂ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿರುವುದರ ಸೂಚನೆ ಎಂದು ಪೋಸ್ಟ್ ಹಂಚಿಕೊಳ್ಳುತ್ತಿರುವವರು ‍ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ಐಸಿಸಿ ರ್‍ಯಾಂಕಿಂಗ್ ಪಟ್ಟಿಯ ಸ್ಕ್ರೀನ್ ಶಾಟ್ ಅನ್ನು ರಿವರ್ಸ್ ಇಮೇಜ್‌ ಸರ್ಚ್‌ಗೆ ಒಳಪಡಿಸಿದಾಗ, ಇದೇ ಪೋಸ್ಟ್ ಅನ್ನು ಹಲವರು ಹಂಚಿಕೊಂಡಿರುವುದು ಕಂಡಿತು. ಮುಂದುವರಿದು, ಐಸಿಸಿ ವೆಬ್‌ಸೈಟ್ ಅನ್ನು ಪರಿಶೀಲಿಸಿದಾಗ, ಅದರಲ್ಲಿ ರ್‍ಯಾಂಕಿಂಗ್‌ ಪಟ್ಟಿ ಕಂಡಿತು. ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕ್ರಮವಾಗಿ ನಾಲ್ಕನೇ ಸ್ಥಾನ ಮತ್ತು ಎರಡನೇ ಸ್ಥಾನವನ್ನು ಪಡೆದಿದ್ದಾರೆ. ನಿರ್ದಿಷ್ಟ ಪದಗಳ ಮೂಲಕ ಗೂಗಲ್‌ನಲ್ಲಿ ಹುಡುಕಾಡಿದಾಗ, ಕೊಹ್ಲಿ ಮತ್ತು ಶರ್ಮಾ ಅವರ ನಿವೃತ್ತಿಯ ಬಗ್ಗೆ ಯಾವುದೇ ಸುದ್ದಿ/ಮಾಹಿತಿ ಸಿಗಲಿಲ್ಲ. ಆದರೆ, ಇವರಿಬ್ಬರ ಹೆಸರುಗಳು ತಾಂತ್ರಿಕ ದೋಷದಿಂದ ರ್‍ಯಾಂಕಿಂಗ್ ಪಟ್ಟಿಯಿಂದ ಕಣ್ಮರೆಯಾಗಿರುವುದರ ಬಗ್ಗೆ ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಆಗಸ್ಟ್ 21ರಂದು ವರದಿಯಾಗಿರುವುದು ಕಂಡಿತು. ಐಸಿಸಿ ತಕ್ಷಣವೇ ಕಾರ್ಯಪ್ರವೃತ್ತವಾಗಿ, ಪಟ್ಟಿಯನ್ನು ಸರಿಪಡಿಸುವ ಮೂಲಕ ಗೊಂದಲ, ಊಹಾಪೋಹಕ್ಕೆ ತೆರೆ ಎಳೆಯಿತು ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.