ಫ್ಯಾಕ್ಟ್‌ಚೆಕ್
‘ಶಿವಸೇನಾದ (ಉದ್ಧವ್ ಬಣ) ಚುನಾವಣಾ ರ್‍ಯಾಲಿಯಲ್ಲಿ ಪಾಕಿಸ್ತಾನದ ಧ್ವಜ! ಪಿಎಫ್‌ಐ, ಸೆಮಿ, ಅಲ್‌ಕೈದಾ ಅವರೆಲ್ಲಾ ಈಗ ಮಾತೋಶ್ರೀ ಬಿರಿಯಾನಿ ತಿನ್ನುವರೇ... ಮುಂಬೈನಲ್ಲಿ ದಾವೂದ್ ಕೂಡ ಸ್ಮಾರಕ ಕಟ್ಟಿಸುತ್ತಾನೆ. ಇವನನ್ನು ಬಾಳಾ ಸಾಬೇಬ್ ಅವರ ‘ನಿಜವಾದ ಪುತ್ರ’ ಎಂದು ಕರೆಯಬೇಕಂತೆ’ ಎಂದು ಬಿಜೆಪಿ ನಾಯಕ ನಿಲೇಶ್ ರಾಣೆ ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಲೋಕಸಭಾ ಚುನಾವಣೆ ಪ್ರಚಾರದ ಶಿವಸೇನಾ (ಉದ್ಧವ್ ಬಣ) ರ್‍ಯಾಲಿಯಲ್ಲಿ ಪಾಕಿಸ್ತಾನದ ಧ್ವಜ ಕಂಡುಬಂದಿದೆ ಎಂದು ಆರೋಪಿಸಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಇದು ಸುಳ್ಳು ಸುದ್ದಿ.
ಶಿವಸೇನಾದ (ಉದ್ಧವ್ ಬಣ) ಅಭ್ಯರ್ಥಿ ಅನಿಲ್ ದೇಸಾಯಿ ಅವರ ಚುನಾವಣಾ ರ್‍ಯಾಲಿಯಲ್ಲಿ ಕಂಡಿರುವುದು ಪಾಕಿಸ್ತಾನದ ಧ್ವಜವಲ್ಲ. ಬದಲಿಗೆ, ಇಸ್ಲಾಂನ ಧಾರ್ಮಿಕ ಧ್ವಜವಾಗಿದೆ. ಇಸ್ಲಾಂನ ಧಾರ್ಮಿಕ ಧ್ವಜದಲ್ಲಿ ಅರ್ಧ ಚಂದ್ರಾಕೃತಿಯ ಮಧ್ಯದಲ್ಲಿ ದೊಡ್ಡದಾದ ನಕ್ಷತ್ರವಿದೆ. ಜೊತೆಗೆ ಬಿಳಿ ಬಿಳಿ ಚುಕ್ಕಿಗಳೂ ಇವೆ. ಆದರೆ, ಪಾಕಿಸ್ತಾನದ ಧ್ವಜದಲ್ಲಿ, ಅರ್ಧ ಚಂದ್ರಾಕೃತಿಯ ಜೊತೆಗೆ ದೊಡ್ಡ ನಕ್ಷವೂ ಇರುತ್ತದೆ ಜೊತೆಗೆ ಧ್ವಜದ ಎಡಬದಿಯಲ್ಲಿ ಬಿಳಿಯ ಅಗಲವಾದ ಪಟ್ಟಿ ಇದೆ. ಆದ್ದರಿಂದ ಶಿವಸೇನಾದ (ಉದ್ಧವ್ ಬಣ) ರ್‍ಯಾಲಿಯಲ್ಲಿ ಕಂಡಿರುವುದು ಪಾಕಿಸ್ತಾನದ ಧ್ವಜವಲ್ಲ ಎಂದು ಬೂಮ್‌ಲೈವ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.