ADVERTISEMENT

ಫ್ಯಾಕ್ಟ್‌ ಚೆಕ್‌: ಮಹಿಳೆಯೊಬ್ಬರು ಹಲವರ ಜೊತೆ ಜಗಳ: ವೈರಲ್‌ ವಿಡಿಯೊ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2022, 19:31 IST
Last Updated 3 ಫೆಬ್ರುವರಿ 2022, 19:31 IST
ಫ್ಯಾಕ್ಟ್ ಚೆಕ್
ಫ್ಯಾಕ್ಟ್ ಚೆಕ್   

ಮಹಿಳೆಯೊಬ್ಬರು ಹಲವರ ಜೊತೆ ಜಗಳ ಮತ್ತು ಹೊಡೆದಾಟದಲ್ಲಿ ಪಾಲ್ಗೊಂಡಿರುವ ವಿಡಿಯೊವೊಂದು ವೈರಲ್‌ ಆಗಿದೆ. ಈ ಘಟನೆ ಮಧ್ಯಪ್ರದೇಶದಲ್ಲಿಗಣರಾಜ್ಯೋತ್ಸವದಂದು ನಡೆದಿದೆ. ಧ್ವಜಾರೋಹಣ ಮಾಡುವುದನ್ನು ಮತ್ತು ಭಾರತ ಮಾತೆಯ ಚಿತ್ರಕ್ಕೆ ಪೂಜೆ ಸಲ್ಲಿಸುವುದನ್ನು ತಡೆಯಲು ಮುಸ್ಲಿಂ ಮಹಿಳೆಯೊಬ್ಬರು ಪ್ರಯತ್ನಿಸಿರುವ ವಿಡಿಯೊ ಇದು ಎಂದು ಹೇಳಲಾಗಿದೆ. ಭಾರತ ಮಾತೆಯ ಭಾವಚಿತ್ರವನ್ನು ಬೇರೊಬ್ಬರ ಕೈಯಿಂದ ಕಸಿದುಕೊಂಡು ಮಹಿಳೆ ವಿರೋಧ ವ್ಯಕ್ತಪಡಿಸಿದ್ದಾಗಿ ಹೇಳಲಾಗಿದೆ.

ವಿಡಿಯೊದಲ್ಲಿ ಸೆರೆ ಆಗಿರುವ ಮಹಿಳೆ ಮುಸ್ಲಿಂ ಅಲ್ಲ. ಅವರು ಪಂಜಾಬಿ ಹಿಂದೂ ಮತ್ತು ಅವರ ಕೈಯಲ್ಲಿ ಇರುವುದು ಭಾರತ ಮಾತೆಯ ಚಿತ್ರವಲ್ಲ ಎಂದು ಆಲ್ಟ್‌ ನ್ಯೂಸ್‌ ವೇದಿಕೆ ವರದಿ ಮಾಡಿದೆ. ಈ ಘಟನೆ ಮಹಾರಾಷ್ಟ್ರದ ಠಾಣೆಯಲ್ಲಿ ಜ.26ರಂದು ನಡೆದಿದೆ. ಮಹಿಳೆಯ ಬಳಿಯಿದ್ದ ಚಿತ್ರವನ್ನು ಕೊಡುವಂತೆ ಅಲ್ಲಿದ್ದ ವ್ಯಕ್ತಿಯೊಬ್ಬರು ಕೇಳಿದಾಗ, ಇದು ಮಾತಾ ರಾಣಿಯ ಚಿತ್ರ ಪುರುಷರ ಕೈಗೆ ಕೊಡಲಾಗುವುದಿಲ್ಲ ಎಂದು ಮಹಿಳೆ ಹೇಳಿದ್ದಾರೆ. ಬಳಿಕ ಇದು ಗುಂಪು ಸಂಘರ್ಷಕ್ಕೆ ಕಾರಣವಾಗಿದೆ. ಈ ಘಟನೆಗೆ ಕೋಮು ಬಣ್ಣ ಬಳಿಯುತ್ತಿರುವುದು ಆತಂಕಕಾರಿ ಆಗಿದೆ ಎಂದು ಅಲ್ಲಿಯ ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT