ADVERTISEMENT

ಫ್ಯಾಕ್ಟ್‌ಚೆಕ್‌ | ಯುವತಿಯರಿಂದ ಹಲ್ಲೆ; ಪ್ರೇರಣೆಯಾಯಿತೇ ಪ್ರಿಯಾಂಕಾ ಅಭಿಯಾನ?

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 2:14 IST
Last Updated 10 ಜನವರಿ 2022, 2:14 IST
ಫ್ಯಾಕ್ಟ್‌ಚೆಕ್‌
ಫ್ಯಾಕ್ಟ್‌ಚೆಕ್‌   

ತಪ್ಪಾದ ಮಾಹಿತಿ:

ಯುವತಿಯರ ಗುಂಪೊಂದು ಯುವಕನೊಬ್ಬನನ್ನು ಕೋಲುಗಳಿಂದ ಮನಬಂದಂತೆ ಥಳಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಿರುವ ಯುವತಿಯರು ಕಾಲೇಜು ಆವರಣದಲ್ಲಿ ಯುವಕನನ್ನು ಥಳಿಸುತ್ತಿರುವುದು ವಿಡಿಯೊದಲ್ಲಿ ಸೆರೆ ಆಗಿದೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗಾಗಿಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಆರಂಭಿಸಿರುವ ‘ನಾನು ಹುಡುಗಿ, ಹೋರಾಡಬಲ್ಲೆ’ ಅಭಿಯಾನದಿಂದ ಪ್ರೇರೇಪಿತರಾಗಿ ಈ ಯುವತಿಯರು ಹೀಗೆ ವರ್ತಿಸಿದ್ದಾರೆ ಎಂದು ಈ ವಿಡಿಯೊವನ್ನು ಬಿಂಬಿಸಲಾಗಿದೆ.

ಸರಿಯಾದ ಮಾಹಿತಿ:

ADVERTISEMENT

ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ ಯುವಕನನ್ನು ಯುವತಿಯರು ಥಳಿಸಿರುವುದು ನಿಜ. ಆದರೆ ಈ ಘಟನೆಗೂ ಪ್ರಿಯಾಂಕಾ ಗಾಂಧಿ ಅವರ ಅಭಿಯಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ‘ಇಂಡಿಯಾ ಟುಡೆ’ ವರದಿ ಮಾಡಿದೆ. ಈ ಘಟನೆಯನ್ನು ಟೈಮ್ಸ್‌ ಆಫ್ ಇಂಡಿಯಾ ಪತ್ರಿಕೆ 2018ರ ಡಿ.10ರಂದು ವರದಿ ಮಾಡಿದೆ. ಉತ್ತರ ಪ್ರದೇಶದ ಬಾಗ್‌ಪತ್‌ನ ಧರಮ್‌ ಸಿಂಗ್ ಸರಸ್ವತಿ ಬಾಲಿಕಾ ಇಂಟರ್‌ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಯುವಕನೊಬ್ಬನ ಅನುಚಿತ ವರ್ತನೆ ಕುರಿತು ಹಲವಾರು ಬಾರಿ ಕಾಲೇಜು ಮಂಡಳಿಗೆ ದೂರು ನೀಡಿದ್ದರೂ ಆತನ ವಿರುದ್ಧ ಯಾವುದೇ ಕ್ರಮ ಜರುಗಿಸಿರಲಿಲ್ಲ. ಇದರಿಂದ ಬೇಸತ್ತ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿ ಈ ಕ್ರಮ ಕೈಗೊಂಡಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.