ADVERTISEMENT

ಅಜ್ಮೇರ್ ಶರೀಫ್ ದರ್ಗಾಕ್ಕೆ ಚಾದರ ಅರ್ಪಿಸಿದ ಸೋನಿಯಾ

​ಪ್ರಜಾವಾಣಿ ವಾರ್ತೆ
Published 5 ಜೂನ್ 2011, 12:45 IST
Last Updated 5 ಜೂನ್ 2011, 12:45 IST
ಅಜ್ಮೇರ್ ಶರೀಫ್ ದರ್ಗಾಕ್ಕೆ ಚಾದರ ಅರ್ಪಿಸಿದ ಸೋನಿಯಾ
ಅಜ್ಮೇರ್ ಶರೀಫ್ ದರ್ಗಾಕ್ಕೆ ಚಾದರ ಅರ್ಪಿಸಿದ ಸೋನಿಯಾ   

ಅಜ್ಮೇರ್ (ಪಿಟಿಐ): ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ ಅವರ 799ನೇ ಉರುಸ್ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ~ಚಾದರ~ ಸಮರ್ಪಿಸಿದರು.

ರಾಷ್ಟ್ರದಲ್ಲಿ ಜಾತ್ಯಾತೀತ ಮೌಲ್ಯಗಳ್ನನು ಉಜ್ವಲಗೊಳಿಸಿದ ಸೂಫಿ ಸಂತ ಎಂದು ಬಣ್ಣಿಸಿರುವ ಸೋನಿಯಾ ಅವರ ಪರವಾಗಿ ರಾಜಾಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ದರ್ಗಾಕ್ಕೆ ಚಾದರವನ್ನು ಸಮರ್ಪಿಸಿದರು. ಚಾದರದೊಂದಿಗೆ ಪತ್ರವನ್ನೂ ರವಾನಿಸಿರುವ ಸೋನಿಯಾ ~ಖ್ವಾಜಾ ಸಾಹೇಬ್ ಅವರ ಜೀವನ ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿರಲಿ. ಭಾರತೀಯ ಸಂಸ್ಕೃತಿಯ ಸಂಕೇತದಂತಿರುವ ಖ್ವಾಜಾ ಅವರ ಜಾತ್ಯಾತೀಯ ಮೌಲ್ಯಗಳು ಇಂದು ನಮ್ಮ ಸಮಾಜದಲ್ಲಿ ಕಾಣಬಹುದಾಗಿದೆ. ಶತಕಗಳೇ ಉರುಳಿದರೂ ಅವರ ಸಂದೇಶ ಇಂದಿಗೂ ಪ್ರಸ್ತುತ ~ ಎಂದು ತಮ್ಮ ಶುಭಹಾರೈಕೆ ಪತ್ರದಲ್ಲಿ ತಿಳಿಸಿದ್ದಾರೆ.

ಪತ್ರವನ್ನು ಕೇಂದ್ರ ಮಂತ್ರಿ ಮುಕುಲ್ ವಾಸ್ನಿಕ್ ದರ್ಗಾದ ಮೆಹ್ಫಿಲ್ ಖಾನಾದಲ್ಲಿ ಓದಿ ಹೇಳಿದರು. ಗಾಂಧಿ ಕುಟುಂಬದ ಖಾದೀಮ್ ಆದ ಸಯೆದ್ ಗಾನಿ ಗುರ್ದೇಜಿ ಅವರು ಯುಪಿಎ ಅಧ್ಯಕ್ಷೆ ಅವರಿಗೆ ಚುನಾರಿಯನ್ನು ಕಳುಹಿಸಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಮಂತ್ರಿಗಳಾದ ಮುಕುಲ್ ವಾಸ್ನಿಕ್, ಡಾ. ಸಿ.ಪಿ. ಜೋಷಿ, ಮಹಾದೇವ್ ಸಿಂಗ್ ಖಾಂಡೇಲಾ, ಸಚಿನ್ ಪೈಲೆಟ್ ಹಾಗೂ ಇತರ ಪಿಸಿಸಿ ನಾಯಕರು ಉಪಸ್ಥಿತರಿದ್ದರು.

ADVERTISEMENT

ಖ್ವಾಜಾ ಸಾಹೇಬ್ ಅವರ 799ನೇ ಉರುಸ್ ಜೂನ್ 3ರಂದು ಆರಂಭವಾಗಿ ಜೂನ್ 9ರವರೆಗೂ ನಡೆಯಲಿದೆ. ಇದು ಅಜ್ಮೇರ್ ನ ವಾರ್ಷಿಕ ಹಬ್ಬವಾಗಿದೆ. ಸೂಫಿ ಸಂತರ ಪುಣ್ಯ ತಿಥಿಯನ್ನು ರಾಜಾಸ್ತಾನ ಆಯೋಜಿಸಲಿದೆ. ಇಸ್ಲಾಂ ಚಂದ್ರಮಾನದ ಪ್ರಕಾರ ಏಳನೇ ತಿಂಗಳಲ್ಲಿ ಆಚರಿಸಲಾಗುವುದು. ಪ್ರತಿ ವರ್ಷ ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.