ADVERTISEMENT

ಅಬು ಸಲೇಂಗೆ 3ನೇ ಮದುವೆ: ಪರೋಲ್‌ ಅರ್ಜಿ ತಿರಸ್ಕೃತ

ಪಿಟಿಐ
Published 21 ಏಪ್ರಿಲ್ 2018, 19:30 IST
Last Updated 21 ಏಪ್ರಿಲ್ 2018, 19:30 IST
ಅಬು ಸಲೇಂಗೆ 3ನೇ ಮದುವೆ: ಪರೋಲ್‌ ಅರ್ಜಿ ತಿರಸ್ಕೃತ
ಅಬು ಸಲೇಂಗೆ 3ನೇ ಮದುವೆ: ಪರೋಲ್‌ ಅರ್ಜಿ ತಿರಸ್ಕೃತ   

ಮುಂಬೈ: ಮದುವೆಗಾಗಿ 40 ದಿನ ಪರೋಲ್‌ ಮೇಲೆ ಬಿಡುಗಡೆ ಮಾಡುವಂತೆ ಕೋರಿ ಭೂಗತ ಪಾತಕಿ ಅಬು ಸಲೇಂ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದೆ.

1993ರಲ್ಲಿ ಸಂಭವಿಸಿದ್ದ ಮುಂಬೈ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪಾತಕಿ ಸದ್ಯ ಮುಂಬೈನ ತಲೋಜಾ ಜೈಲಿನಲ್ಲಿದ್ದಾನೆ.

ಪರೋಲ್‌ ಮೇಲೆ ಬಿಡುಗಡೆ ಮಾಡುವಂತೆ ಕೋರಿ ತಿಂಗಳ ಹಿಂದೆಯೇ ಆತ ಸಲ್ಲಿಸಿದ್ದ ಅರ್ಜಿಯನ್ನು  ಭದ್ರತೆಯ ಕಾರಣ ನೀಡಿ ತಿರಸ್ಕರಿಸಲಾಗಿದೆ.

ADVERTISEMENT

50 ವರ್ಷದ ಅಬು ಸಲೇಂ ಮೂರನೇ ಬಾರಿ ಮದುವೆಗೆ ಸಜ್ಜಾಗಿದ್ದಾನೆ. ಮುಂಬ್ರಾದ ಕೌಸರ್‌ ಎಂಬ ಮಹಿಳೆ ಜತೆ ಮೇ 5ರಂದು ಆತನ ಮದುವೆ ನಿಗದಿಯಾಗಿದೆ.

ಮೂಲತಃ ಉತ್ತರ ಪ್ರದೇಶದ ಅಜಂಗಡದ ಸಲೇಂನನ್ನು 2005ರಲ್ಲಿ ಪೋರ್ಚುಗಲ್‌ನಿಂದ ಬಂಧಿಸಿ ಭಾರತಕ್ಕೆ ಕರೆತರಲಾಗಿತ್ತು. ಮುಂಬೈ ಸರಣಿ ಸ್ಫೋಟ ಪ್ರಕರಣದ ಸಂಬಂಧ ಇಲ್ಲಿನ ವಿಶೇಷ ಟಾಡಾ ನ್ಯಾಯಾಲಯ ಕಳೆದ ವರ್ಷ ಅಬು ಸಲೇಂ, ಕರಿಮುಲ್ಲಾ ಖಾನ್‌ ಮತ್ತು ಇತರ ಮೂವರಿಗೆ ಶಿಕ್ಷೆ ವಿಧಿಸಿತ್ತು.

1993ರಲ್ಲಿ ಮುಂಬೈನ 12 ಸ್ಥಳಗಳಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟದಲ್ಲಿ 257 ಜನರು ಮೃತಪಟ್ಟು, 713 ಜನರು ಗಂಭೀರವಾಗಿ ಗಾಯಗೊಂಡಿದ್ದರು. ಅಂದಾಜು ₹27 ಕೋಟಿ ಮೌಲ್ಯದ ಆಸ್ತಿಪಾಸ್ತಿಗೆ ಹಾನಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.