ADVERTISEMENT

ಅಮರನಾಥ ಯಾತ್ರೆ: ನೋಂದಣಿ ಮೇ 10 ರಿಂದ ಆರಂಭ

​ಪ್ರಜಾವಾಣಿ ವಾರ್ತೆ
Published 3 ಮೇ 2011, 11:15 IST
Last Updated 3 ಮೇ 2011, 11:15 IST

ಜಮ್ಮು (ಐಎಎನ್ಎಸ್): ಜಮ್ಮು ಮತ್ತು ಕಾಶ್ಮೀರದ ಹೆಸರಾಂತ ಅಮರನಾಥ ಕ್ಷೇತ್ರದ  ವಾರ್ಷಿಕ ತೀರ್ಥಯಾತ್ರೆಯ ನೋಂದಣಿ ಪ್ರಕ್ರಿಯೆಯನ್ನು ಅಮರನಾಥ ದೇವಸ್ಥಾನ ಮಂಡಳಿ (ಎಸ್ಎಎಸ್ ಬಿ) ಮೇ 10ರಿಂದ ಆರಂಭಿಸಲಿದೆ.

ಈ ವರ್ಷ ಯಾತ್ರಿಗಳಿಗೆ ಅನುಕೂಲವಾಗಲೆಂದು ದೇಶದಾದ್ಯಂತ ನೂತನವಾಗಿ ಜಾಲತಾಣ ನೋಂದಣಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಜೂನ್ 29 ರಿಂದ ಆರಂಭವಾಗಲಿರುವ ಅಮರನಾಥ ಯಾತ್ರೆಯು ಆಗಸ್ಟ್ 13ರ ರಕ್ಷಾ ಬಂಧನ ಹಬ್ಬದವರೆಗೆ ನಡೆಯಲಿದೆ.

ADVERTISEMENT

ಅಮರನಾಥ ಯಾತ್ರಿಗಳಿಗೆ ಈ ನೋಂದಣಿಯು ಕಡ್ಡಾಯವಾಗಿದೆ.

~ಯಾತ್ರಿಗಳಿಗಾಗಿ ದೇಶದಾದ್ಯಂತ 149 ಅಧಿಕೃತ ವಿವಿಧ ಬ್ಯಾಂಕ್ ಗಳಲ್ಲಿ ನೋಂದಣಿಗೆ ಅನುವು ಮಾಡಿಕೊಡಲಾಗಿದೆ~ ಎಂದು ಅಮರನಾಥ ದೇವಸ್ಥಾನದ ಮಂಡಳಿಯ ಸಿಇಒ ಆರ್.ಕೆ. ಗೊಯಲ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.