ADVERTISEMENT

ಅಮಿತಾಭ್ ಬಚ್ಚನ್ ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 19:30 IST
Last Updated 10 ಏಪ್ರಿಲ್ 2012, 19:30 IST

ಮುಂಬೈ(ಪಿಟಿಐ): ಎರಡು ತಿಂಗಳ ಹಿಂದೆ ಹೊಟ್ಟೆ ನೋವಿನಿಂದಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ನಟ ಅಮಿತಾಭ್ ಬಚ್ಚನ್ ಅವರಿಗೆ ಮತ್ತೆ ತೀವ್ರವಾದ ನೋವು ಕಾಣಿಸಿಕೊಂಡಿದೆ. ಅವರು ಮಂಗಳವಾರ ಪೂರ್ವ ಅಂಧೇರಿಯಲ್ಲಿರುವ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಸಿ.ಟಿ. ಸ್ಕ್ಯಾನ್‌ಗೆ ಒಳಪಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
 
ಕಳೆದ ಮೂರು ದಿನಗಳಿಂದ ಮತ್ತೆ ಅತಿಯಾದ ನೋವು ಕಾಣಿಸಿಕೊಂಡಿದೆ ಎಂದು ಬ್ಲಾಗ್‌ನಲ್ಲಿ ಬರೆದಿರುವ ಬಚ್ಚನ್, ಸೋಮವಾರ ರಾತ್ರಿ ಅತಿಯಾದ ನೋವು ಕಾಣಿಸಿಕೊಂಡಿದ್ದು ತೀವ್ರ ಯಾತನೆಯಿಂದ ನಡೆದಾಡಲು ಸಹ ಕಷ್ಟವಾಗುತ್ತಿದೆ ಮತ್ತು  ಹಾಸಿಗೆಯಿಂದ ಏಳುವುದಕ್ಕೂ ಆಗುತ್ತಿಲ್ಲ ಎಂದಿದ್ದಾರೆ.

`ನೋವು ನಿವಾರಕ ಮಾತ್ರೆ ನನ್ನನ್ನು ನೋವಿನಿಂದ ರಕ್ಷಿಸಿತ್ತು~ ಎಂದಿರುವ ಅವರು, ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ನೋವಿರಲಿಲ್ಲ, ಆದರೆ ಮತ್ತೆ ನೋವು ಕಾಣಿಸಿಕೊಂಡಿರುವುದಕ್ಕೆ ದಿಗ್ಭ್ರಮೆಯಾಗಿದೆ~ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.