
ನವದೆಹಲಿ: ಭಾರತದ ರಾಷ್ಟ್ರಧ್ವಜದ ಮಾದರಿಯ ಡೋರ್ ಮ್ಯಾಟ್‍ನ್ನು ಅಮೆಜಾನ್ ಸಂಸ್ಥೆ ಆನ್‍ಲೈನ್‍ನಲ್ಲಿ ಮಾರಾಟಕ್ಕಿಟ್ಟಿದೆ. ಕೆನಡಾದ ಅಮೆಜಾನ್ ಶಾಪಿಂಗ್ ಪೋರ್ಟಲ್‍ನಲ್ಲಿ ಭಾರತದ ರಾಷ್ಟ್ರಧ್ವಜದ ಮಾದರಿಯ ಡೋರ್ ಮ್ಯಾಟ್ (ಕಾಲೊರಸು) ಜಾಹೀರಾತು ಪ್ರಕಟವಾಗಿದೆ.
ಈ ರೀತಿ ರಾಷ್ಟ್ರಧ್ವಜವನ್ನು ಅವಮಾನಿಸಿದ ಅಮೆಜಾನ್ ಕೂಡಲೇ ಆ ಉತ್ಪನ್ನವನ್ನು ವೆಬ್‍ಸೈಟ್‍ನಿಂದ ತೆಗೆದು ಹಾಕಬೇಕು ಎಂದು Change.org ಅಭಿಯಾನ ಆರಂಭಿಸಿದೆ. ಅಮೆಜಾನ್ ವಿರುದ್ಧ ಭಾರತೀಯರು ಆನ್‍ಲೈನ್ ಪ್ರತಿಭಟನೆಗಳನ್ನೂ ಆರಂಭಿಸಿದ್ದಾರೆ.
ಅಮೆಜಾನ್ ವೆಬ್‍ಸೈಟಿನಲ್ಲಿಯೂ ಭಾರತೀಯರು ಕಾಮೆಂಟ್ ಮಾಡಿ, ಉತ್ಪನ್ನದ ಜಾಹೀರಾತು ತೆಗೆದು ಹಾಕುವಂತೆ ಒತ್ತಾಯಿಸಿದ್ದಾರೆ.
ಭಾರತದ ರಾಷ್ಟ್ರಧ್ವಜ ಸಂಹಿತೆಯ ಪ್ರಕಾರ ರಾಷ್ಟ್ರಧ್ವಜವನ್ನು ಬೇರೆ ಯಾವುದೇ ರೀತಿಯ ಉತ್ಪನ್ನಗಳಿಗಾಗಿ ಬಳಸುವಂತಿಲ್ಲ.
ಏತನ್ಮಧ್ಯೆ, ಕೆನಡಾ ಮತ್ತು ಅಮೆರಿಕದಲ್ಲಿ ಪ್ರಸ್ತುತ ದೇಶಗಳ ರಾಷ್ಟ್ರಧ್ವಜವನ್ನು ಯಾವುದೇ ಉತ್ಪನ್ನಗಳಲ್ಲಿ ಬಳಸಬಹುದಾಗಿದೆ. ಅಮೆರಿಕನ್ನರು ಮತ್ತು ಕೆನಡಾದ ಜನರು ತಮ್ಮ ರಾಷ್ಟ್ರಧ್ವಜದ ಮಾದರಿಯನ್ನು ತಮ್ಮ ವಸ್ತ್ರಗಳಲ್ಲಿ, ಒಳ ಉಡುಪುಗಳಲ್ಲಿ ಹಾಗೂ ಕಾಲೊರಸುಗಳಲ್ಲಿ ಬಳಸುತ್ತಿದ್ದು, ಇಂಥಾ ಉತ್ಪನ್ನಗಳು ಅಮೆಜಾನ್ ಪೋರ್ಟಲ್‍ನಲ್ಲಿ ಮಾರಾಟಕ್ಕಿವೆ.
ಪ್ರತಿಭಟನೆಯ ಬಿಸಿ ತಟ್ಟುತ್ತಿದ್ದಂತೆ ಪ್ರಸ್ತುತ ಉತ್ಪನ್ನ ಜಾಹೀರಾತನ್ನು ತೆಗೆಯಲಾಗಿದೆ.
ವೀಸಾ ಸಿಗುವುದಿಲ್ಲ...ಎಚ್ಚರಿಕೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.