ADVERTISEMENT

ಅರವಿಂದ್ ಮಫತ್‌ಲಾಲ್ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2011, 19:30 IST
Last Updated 30 ಅಕ್ಟೋಬರ್ 2011, 19:30 IST
ಅರವಿಂದ್ ಮಫತ್‌ಲಾಲ್ ಇನ್ನಿಲ್ಲ
ಅರವಿಂದ್ ಮಫತ್‌ಲಾಲ್ ಇನ್ನಿಲ್ಲ   

ಭೋಪಾಲ, (ಪಿಟಿಐ): ದೀರ್ಘ ಕಾಲದಿಂದ ಅಸ್ವಸ್ಥರಾಗಿದ್ದ ಖ್ಯಾತ ಉದ್ಯಮಿ ಅರವಿಂದ್ ಮಫತ್‌ಲಾಲ್ (88) ಮಧ್ಯ ಪ್ರದೇಶದ ಚಿತ್ರಕೂಟದಲ್ಲಿ ಭಾನುವಾರ ನಿಧನರಾದರು.

ಅವರು ಪುತ್ರ ಅರವಿಂದ್ ಮಫತ್‌ಲಾಲ್ ಉದ್ಯಮ ಸಮೂಹದ ಅಧ್ಯಕ್ಷ ಹೃಷಿಕೇಶ್ ಮಫತ್‌ಲಾಲ್ ಮತ್ತು ಪುತ್ರಿ ಮೈಥಿಲಿ ದೇಸಾಯಿ ಅವರನ್ನು ಅಗಲಿದ್ದಾರೆ.

ಚಿತ್ರಕೂಟದಲ್ಲಿಯೇ ಕೊನೆಯ ದಿನಗಳನ್ನು ಕಳೆಯಬೇಕೆಂಬ ಅರವಿಂದ್ ಅವರ ಆಸೆಯಂತೆ ಒಂದು ತಿಂಗಳ ಹಿಂದೆ ಅವರನ್ನು ಮುಂಬೈನಿಂದ ಅಲ್ಲಿಗೆ ಕರೆತರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.