ADVERTISEMENT

ಅರುಣಾಚಲ: ಚಂಡಮಾರುತಕ್ಕೆ ಒಬ್ಬ ಬಲಿ, ನೆಲೆ ಕಳೆದುಕೊಂಡ 100ಕ್ಕೂ ಹೆಚ್ಚು ಜನರು

ಏಜೆನ್ಸೀಸ್
Published 17 ಮೇ 2017, 14:25 IST
Last Updated 17 ಮೇ 2017, 14:25 IST
ಅರುಣಾಚಲ: ಚಂಡಮಾರುತಕ್ಕೆ  ಒಬ್ಬ ಬಲಿ, ನೆಲೆ ಕಳೆದುಕೊಂಡ 100ಕ್ಕೂ ಹೆಚ್ಚು ಜನರು
ಅರುಣಾಚಲ: ಚಂಡಮಾರುತಕ್ಕೆ ಒಬ್ಬ ಬಲಿ, ನೆಲೆ ಕಳೆದುಕೊಂಡ 100ಕ್ಕೂ ಹೆಚ್ಚು ಜನರು   
ಇಟಾನಗರ: ಅರುಣಾಚಲ ಪ್ರದೇಶದಲ್ಲಿ ಸೈಕ್ಲೋನ್ ಪ್ರವೇಶ ಮಾಡಿದ್ದು, ಇದರ ಅಬ್ಬರಕ್ಕೆ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. 100ಕ್ಕೂ ಹೆಚ್ಚು ಜನರು ನೆಲೆ ಕಳೆದುಕೊಂಡಿದ್ದಾರೆ. ಅಲ್ಲದೇ 180ಕ್ಕೂ ಹೆಚ್ಚು ಮನೆಗಳು ನೆಲಸಮಗೊಂಡಿವೆ. 
 
ನಮಾಸೈ ಜಿಲ್ಲೆಯ ನ್ಯೂ ಮೊಹೊಂಗ್ ಪ್ರದೇಶದ ಖೋನಿಲ್ ಗೊಗೊಯ್ ಅವರ ಮೇಲೆ ಕಟ್ಟಡ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
 
90 ನಿಮಿಷಗಳ ಸೈಕ್ಲೋನ್ ಆರ್ಭಟಕ್ಕೆ ಮರಗಳು ಧರೆಗುರುಳಿವೆ. ಇದರ ಪರಿಣಾಮ ಅನೇಕ ರಸ್ತಗಳ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. 
 
ಉಪಮುಖ್ಯಮಂತ್ರಿ ಚೌಹಾಣ್ ಮೇ ಅವರು, ಸೈಕ್ಲೋನ್‌ನಿಂದ ತತ್ತರಿಸಿದ ಕುಟುಂಬಗಳಿಗೆ ಮೂಲ ಸೌಲಭ್ಯಗಳನ್ನು ತಕ್ಷಣವೇ ಒದಗಿಸಬೇಕೆಂದು ಜಿಲ್ಲಾ ಆಡಳಿತಾಧಿಕಾರಿಗಳಿಗೆ ಸೂಚಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.