ADVERTISEMENT

ಅರ್ಜಿದಾರರಿಗೆ ಬೆದರಿಕೆ ಕರೆ

ಶಬರಿಮಲೆ: ಮಹಿಳೆಯರ ಪ್ರವೇಶ ನಿಷೇಧ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2016, 19:31 IST
Last Updated 15 ಜನವರಿ 2016, 19:31 IST
ಅರ್ಜಿದಾರರಿಗೆ ಬೆದರಿಕೆ ಕರೆ
ಅರ್ಜಿದಾರರಿಗೆ ಬೆದರಿಕೆ ಕರೆ   

ನವದೆಹಲಿ (ಪಿಟಿಐ): ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಪ್ರವೇಶಕ್ಕೆ ಇರುವ ನಿಷೇಧವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಯುವ ವಕೀಲರ ಸಂಘದ (ಐವೈಎಲ್‌ಎ) ಅಧ್ಯಕ್ಷ ನೌಶಾದ್‌ ಅಹ್ಮದ್‌ ಖಾನ್‌ಗೆ ಹಲವು ಬೆದರಿಕೆ ಕರೆಗಳು ಬಂದಿವೆ.

ಅದರಲ್ಲಿ ಹಲವು ಕರೆಗಳು ಅಮೆರಿಕದಿಂದಲೂ ಬಂದಿವೆ. ‘ಪಿಐಎಲ್‌ ಸಲ್ಲಿಸಿದ ಬಳಿಕ 500 ಕ್ಕೂ ಅಧಿಕ ಬೆದರಿಕೆ ಕರೆಗಳು ಬಂದಿವೆ. ಆದ್ದರಿಂದ ಪಿಐಎಲ್‌ ವಾಪಸ್‌ ಪಡೆಯಲು ಬಯಸಿದ್ದೇನೆ’ ಎಂದು ನೌಶಾದ್‌ ಅಹ್ಮದ್‌ ಖಾನ್‌ ಸುಪ್ರೀಂಕೋರ್ಟ್‌ಗೆ ತಿಳಿಸಿದ್ದರು.
ಒಮ್ಮೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ ಬಳಿಕ ಅದನ್ನು ಹಿಂದಕ್ಕೆ ಪಡೆಯಲು ಅವಕಾಶವಿಲ್ಲ ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ಹೇಳಿದೆ.

‘ಒಮ್ಮೆ ಪಿಐಎಲ್‌ ಅನ್ನು ವಿಚಾರಣೆಗೆ ಕೈಗೆತ್ತಿಕೊಂಡ ಬಳಿಕ ಅದನ್ನು ಹಿಂಪಡೆಯಲು ಸಾಧ್ಯವಿಲ್ಲ. ಈ ವಿಚಾರವನ್ನು ಎಲ್ಲರೂ ತಿಳಿದುಕೊಂಡಿರಬೇಕು’ ಎಂದು ನ್ಯಾಯಮೂರ್ತಿಗಳಾದ ದೀಪಕ್‌ ಮಿಶ್ರಾ ಮತ್ತು ಎನ್‌.ವಿ. ರಮಣ ಅವರನ್ನೊಳಗೊಂಡ ಪೀಠ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.