ADVERTISEMENT

ಅವಧಿಗೆ ಮುಂಚೆ ಅಧಿವೇಶನ ಕರೆಯಲು ಬಿಜೆಪಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 19:59 IST
Last Updated 3 ಜೂನ್ 2013, 19:59 IST

ಹೈದರಾಬಾದ್ (ಪಿಟಿಐ): ಆಹಾರ ಭದ್ರತಾ ಮಸೂದೆ ಜಾರಿಗೊಳಿಸುವತ್ತ ಬಿಜೆಪಿ ಒಲವು ತೋರಿದ್ದು, ಈ ಉದ್ದೇಶಕ್ಕಾಗಿ ಸಂಸತ್ತಿನ ಮುಂಗಾರು ಅಧಿವೇಶನವನ್ನು ನಿಗದಿತ ಅವಧಿಗಿಂತ ಮುಂಚೆಯೇ ಕರೆಯಬೇಕು ಎಂದು ಆಗ್ರಹಿಸಿದೆ.

`ಆಹಾರ ಭದ್ರತಾ ಮಸೂದೆ ಹಾಗೂ ಭೂಸ್ವಾಧೀನ ಮಸೂದೆ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ನಾವು ಸಿದ್ಧರಿದ್ದೇವೆ. ಕೆಲವು ತಿದ್ದುಪಡಿಗಳೊಂದಿಗೆ ಈ ಮಸೂದೆಗಳು ಅಂಗೀಕಾರ ಪಡೆಯಬೇಕು ಎಂಬುದು ನಮ್ಮ ಉದ್ದೇಶ. ಹೀಗಾಗಿ ಮುಂಗಾರು ಅಧಿವೇಶನವನ್ನು ಇನ್ನಷ್ಟು ದಿನ ಮುಂದುವರಿಸಬೇಕು' ಎಂದು ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ದ್ದೇಶಿತ ಆಹಾರ ಭದ್ರತಾ ಮಸೂದೆ ಸಂಬಂಧ  ಯುಪಿಎ ಸರ್ಕಾರ ಸುಗ್ರೀವಾಜ್ಞೆ ಜಾರಿ ಮಾಡಿದರೆ ಅದೊಂದು ಕ್ರೂರ ವ್ಯಂಗ್ಯವಾಗಲಿದೆ. ಕಾನೂನು ಹಾಗೂ ರೈಲ್ವೆ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದ ಬಿಜೆಪಿ ಬೇಡಿಕೆಯನ್ನು ಯುಪಿಎ ಸರ್ಕಾರ ಒಪ್ಪಿದ್ದರೆ ಕಳೆದ ಅಧಿವೇಶನದಲ್ಲಿಯೇ ಎರಡೂ ಮಸೂದೆಗಳು ಅಂಗೀಕಾರ ಪಡೆಯುತ್ತಿದ್ದವು' ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.