ADVERTISEMENT

ಆತ್ಮಹತ್ಯೆಯ ಬೆದರಿಕೆ ಒಡ್ಡುವ ಪತ್ನಿ ಜತೆ ಸಂಸಾರ ಅಪಾಯಕಾರಿ

ಪಿಟಿಐ
Published 4 ಮಾರ್ಚ್ 2018, 19:30 IST
Last Updated 4 ಮಾರ್ಚ್ 2018, 19:30 IST
ಆತ್ಮಹತ್ಯೆಯ ಬೆದರಿಕೆ ಒಡ್ಡುವ ಪತ್ನಿ ಜತೆ ಸಂಸಾರ ಅಪಾಯಕಾರಿ
ಆತ್ಮಹತ್ಯೆಯ ಬೆದರಿಕೆ ಒಡ್ಡುವ ಪತ್ನಿ ಜತೆ ಸಂಸಾರ ಅಪಾಯಕಾರಿ   

ನವದೆಹಲಿ: ಪದೇ ಪದೇ ಆತ್ಮಹತ್ಯೆಯ ಬೆದರಿಕೆ ಒಡ್ಡುವ ಪತ್ನಿಯ ಜತೆ ಸಂಸಾರ ನಡೆಸುವುದು ಅಪಾಯಕಾರಿ ಎಂದು ದೆಹಲಿ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಅಕ್ರಮ ಸಂಬಂಧಗಳ ಕುರಿತು ಪತಿಯ ವಿರುದ್ಧ ಪತ್ನಿ ಮಾಡುವ ಸುಳ್ಳು ಆರೋಪಗಳು ಆತನ ಮಾನಸಿಕ ಕ್ಷೋಭೆಗೆ ಕಾರಣವಾಗುತ್ತವೆ ಮತ್ತು ಕೌಟುಂಬಿಕ ಸಾಮರಸ್ಯ ಹಾಳು ಮಾಡುತ್ತವೆ ಎಂದು ಹೈಕೋರ್ಟ್‌ ದ್ವಿಸದಸ್ಯ ಪೀಠ ಹೇಳಿದೆ.

ಪತ್ನಿಯ ಸುಳ್ಳು ಆರೋಪ ಮತ್ತು ಬೆದರಿಕೆಗಳಿಂದ ರೋಸಿಹೋದ ವ್ಯಕ್ತಿಯ ವಿವಾಹ ವಿಚ್ಛೇದನ ಅರ್ಜಿ ಮಾನ್ಯ ಮಾಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ.

ADVERTISEMENT

ಸಹೋದರನ ಪತ್ನಿಯ ಜತೆ ತನ್ನ ಪತಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ಪತಿ ಮತ್ತು ಸಂಬಂಧಿ ಮಹಿಳೆ ನಡುವೆ ಅಕ್ರಮ ಸಂಬಂಧ ಕಲ್ಪಿಸಿಕೊಂಡು ಅವರ ಗೌರವ ಹಾಳು ಮಾಡುವುದು ಸರಿಯಲ್ಲ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.