ಮುಂಬೈ (ಪಿಟಿಐ): ಬಹುಕೋಟಿ ರೂಪಾಯಿ ಮೌಲ್ಯದ ಆದರ್ಶ ಹೌಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ನಿವೃತ್ತ ಬ್ರಿಗೇಡಿಯರ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ.
ರಕ್ಷಣಾ ಖಾತೆಯ ಹಿರಿಯ ಅಧಿಕಾರಿ ಆರ್.ಸಿ.ಠಾಕೂರ್, ನಿವೃತ್ತ ಬ್ರಿಗೇಡಿಯರ್ ಎಂ.ಎಂ.ವಾಂಚೂ, ನಗರಾಭಿವೃದ್ಧಿ ಇಲಾಖೆಯ ಮಾಜಿ ಉಪ ಕಾರ್ಯದರ್ಶಿ ಪಿ.ವಿ. ದೇಶ್‌ಮುಖ್ ಹಾಗೂ ವಿಧಾನಪರಿಷತ್ ಸದಸ್ಯ ಕಾಂಗ್ರೆಸ್‌ನ ಕನ್ನೈಲಾಲ್ ಜಿದ್ವಾನಿ ಬಂಧಿತ ಆರೋಪಿಗಳು.
ಎರಡು ದಿನಗಳ ಹಿಂದೆ ಬಾಂಬೆ ಹೈಕೋರ್ಟ್‌ನಲ್ಲಿ ಇದೇ ಪ್ರಕರಣಕ್ಕೆ ಸಂಬಂಧಪಟ್ಟ ವಿಚಾರಣೆ ಸಮಯದಲ್ಲಿ ಆರೋಪಿಗಳನ್ನು ಬಂಧಿಸದ ಹಾಗೂ ತನಿಖೆ ವಿಳಂಬ ಕುರಿತು ನ್ಯಾಯಮೂರ್ತಿಗಳು ಸಿಬಿಐ ಅಧಿಕಾರಿಗಳನ್ನು ತೀವ್ರವಾಗಿ ಪ್ರಶ್ನಿಸಿದ್ದರು. ಈ ಘಟನೆಯ ನಂತರ ಆರೋಪಿಗಳನ್ನು ಬಂಧಿಸಲಾಗಿದೆ.
ಈ ಹಗರಣದ ಆರೋಪ ಪಟ್ಟಿಯಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಹೆಸರೂ ಸೇರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.