ADVERTISEMENT

ಆಧಾರ್‌ ಜೋಡಣೆಯ ಗಡುವು ವಿಸ್ತರಿಸಿದ ಸುಪ್ರೀಂ

ಏಜೆನ್ಸೀಸ್
Published 13 ಮಾರ್ಚ್ 2018, 19:34 IST
Last Updated 13 ಮಾರ್ಚ್ 2018, 19:34 IST
ಆಧಾರ್‌ ಜೋಡಣೆಯ ಗಡುವು ವಿಸ್ತರಿಸಿದ ಸುಪ್ರೀಂ
ಆಧಾರ್‌ ಜೋಡಣೆಯ ಗಡುವು ವಿಸ್ತರಿಸಿದ ಸುಪ್ರೀಂ   

ನವದೆಹಲಿ: ಬ್ಯಾಂಕ್‌ ಖಾತೆ, ಮೊಬೈಲ್‌ ಸಿಮ್‌ ಸೇರಿ ವಿವಿಧ ಸೇವೆಗಳಿಗೆ ಆಧಾರ್‌ ಜೋಡಣೆ ಮಾಡಲು ಮಾರ್ಚ್‌ 31ರವರೆಗೆ ನಿಗದಿಪಡಿಸಿದ್ದ ಗಡುವನ್ನು ಸುಪ್ರೀಂ ಕೋರ್ಟ್‌ ಅನಿರ್ದಿಷ್ಟಾವಧಿಗೆ ವಿಸ್ತರಿಸಿದೆ.

ಮುಂದಿನ ಆದೇಶದ ವರೆಗೂ ಆಧಾರ್ ಜೋಡಣೆ ಗಡುವು ಮುಂದೂಡಿ ಮಂಗಳವಾರ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದೆ.

ಸಮಾಜ ಕಲ್ಯಾಣ ಕಾರ್ಯಕ್ರಮಗಳ ಅಡಿ ಸರ್ಕಾರದಿಂದ ಪಡೆಯುವ ಸವಲತ್ತುಗಳಿಗೆ ಆಧಾರ್‌ ಕಡ್ಡಾಯ ಎಂದು ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಹೇಳಿದೆ. 

ADVERTISEMENT

ಆಧಾರ್ ಕಡ್ಡಾಯ ಬಳಕೆ ಪ್ರಶ್ನಿಸಿ ದಾಖಲಾಗಿರುವ ದೂರಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಕೈಗೆತ್ತಿಕೊಂಡಿದೆ.

ಇನ್ನಷ್ಟು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.