ADVERTISEMENT

ಆಸ್ತಿ ಘೋಷಿಸಿ: ಸೋನಿಯಾಗೆ ಸವಾಲು

​ಪ್ರಜಾವಾಣಿ ವಾರ್ತೆ
Published 13 ಜೂನ್ 2011, 19:30 IST
Last Updated 13 ಜೂನ್ 2011, 19:30 IST

ಡೆಹ್ರಾಡೂನ್ (ಪಿಟಿಐ): ಕಾಂಗ್ರೆಸ್ಸಿಗರ ಒತ್ತಾಯದಂತೆ ಆಸ್ತಿ ಘೋಷಿಸಿದ ಬಾಬಾ ರಾಮ್‌ದೇವ್ ಅವರಂತೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ತಾವು ಅಧ್ಯಕ್ಷರಾಗಿರುವ ಟ್ರಸ್ಟ್‌ಗಳ ಆಸ್ತಿಯನ್ನು ಘೋಷಿಸಲಿ ಎಂದು ಬಿಜೆಪಿ ಸವಾಲು ಎಸೆದಿದೆ. 

ರಾಜೀವ್ ಗಾಂಧಿ ಚಾರಿಟಬಲ್ ಟ್ರಸ್ಟ್ ಸೇರಿದಂತೆ ಡಜನ್‌ಗೂ ಮಿಕ್ಕಿ ಟ್ರಸ್ಟ್‌ಗಳಿಗೆ ಅಧ್ಯಕ್ಷರಾಗಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವುಗಳ ಹಣಕಾಸಿನ ವ್ಯವಹಾರಗಳನ್ನು ಬಹಿರಂಗಪಡಿಸಬೇಕು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಥಾವರ್‌ಚಂದ್ರ ಗೆಹ್ಲೋಟ್ ಅವರು ಸೋಮವಾರ ಆಗ್ರಹಿಸಿದ್ದಾರೆ.

ಈ ಟ್ರಸ್ಟ್‌ಗಳಿಗೆ ಎಲ್ಲಿಂದ ಹಣ ಬರುತ್ತದೆ ಮತ್ತು ಅದನ್ನು ಯಾತಕ್ಕಾಗಿ ಖರ್ಚು ಮಾಡಲಾಗಿದೆ ಎಂಬುವುದನ್ನು ಸೋನಿಯಾ ದೇಶದ ಜನರಿಗೆ ತಿಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸತ್ಯಾಗ್ರಹ ನಿರತ ರಾಮ್‌ದೇವ್ ಜತೆ ಸರ್ಕಾರ ನಡೆದುಕೊಂಡಿರುವ ರೀತಿ ಪ್ರಜಾತಂತ್ರ ವಿರೋಧಿ ಮತ್ತು ದುರ್ದೈವದ ಸಂಗತಿ.

ಅದಕ್ಕಾಗಿ ಪ್ರಧಾನಿ ಮತ್ತು ಗೃಹ ಸಚಿವರು ಬಾಬಾ ಕ್ಷಮೆ ಯಾಚಿಸಬೇಕು ಎಂದು ಗೆಹ್ಲೋಟ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.