ADVERTISEMENT

ಆ್ಯಂಬುಲೆನ್ಸ್ ಸೌಕರ್ಯವಿಲ್ಲದ ಕಾರಣ ಮೃತದೇಹದ ಎಲುಬು ಮುರಿದು ಮೂಟೆ ಕಟ್ಟಿ ಹೊತ್ತೊಯ್ದರು!

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2016, 13:58 IST
Last Updated 26 ಆಗಸ್ಟ್ 2016, 13:58 IST
ಮೃತದೇಹವನ್ನು ಮೂಟೆ ಕಟ್ಟಿ ಸಾಗಿಸುತ್ತಿರುವುದು
ಮೃತದೇಹವನ್ನು ಮೂಟೆ ಕಟ್ಟಿ ಸಾಗಿಸುತ್ತಿರುವುದು   

ಬಲಾಸೋರ್, ಒಡಿಶಾ:  ಒಡಿಶಾದ ಕಾಳಹಂಡಿ ಜಿಲ್ಲೆಯ ದಾನಾ ಸಿಂಗ್‌ ಮಾಝಿ ತನ್ನ ಪತ್ನಿಯ ಹೆಣಹೊತ್ತು ಸಾಗಿದ ಘಟನೆಯ ದೃಶ್ಯ ಇನ್ನು ಮನಸ್ಸಿನಿಂದ ಮಾಸಿಲ್ಲ. ಇದೀಗ ಹೃದಯ ಕಲಕುವ ಅಂಥದ್ದೇ ಘಟನೆಯೊಂದು ಬಲಾಸೋರ್ ಜಿಲ್ಲೆಯಿಂದ ವರದಿಯಾಗಿದೆ.

ಬುಧವಾರ ರೈಲು ಅಪಘಾತದಲ್ಲಿ ಸಾವಿಗೀಡಾಗಿದ್ದ ಸಲಾಮಾನಿ ಬಾರಿಕ್ ಎಂಬ 76ರ ಹರೆಯದ ವಿಧವೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಲಸೋರ್ ಪಟ್ಟಣಕ್ಕೆ ಸಾಗಿಸಬೇಕಾಗಿತ್ತು. ಆದರೆ ಅಲ್ಲಿಗೆ ಸಾಗಿಸಲು ಆ್ಯಂಬುಲೆನ್ಸ್ ವ್ಯವಸ್ಥೆ ಇರಲಿಲ್ಲ. ಅಲ್ಲಿನ  ಕಮ್ಯೂನಿಟಿ ಹೆಲ್ತ್ ಸೆಂಟರ್ ನಲ್ಲಿಟ್ಟಿದ್ದ ಮೃತದೇಹವನ್ನು 30 ಕಿಮಿ ದೂರವಿರುವ ಆಸ್ಪತ್ರೆಗೆ ಸಾಗಿಸಲು ಮಾಡುವುದೇನು?  ಮೃತದೇಹವನ್ನು ಸಾಗಿಸಲು ಆಟೋದವನಲ್ಲಿ ಕೇಳಿದರೆ ಆಟೋ ಚಾರ್ಜ್ ದುಬಾರಿಯಾಗಿತ್ತು.

ಹೀಗಿರುವಾಗ ಅಲ್ಲಿನ ಕೆಲಸದವರು ಆ ಮೃತದೇಹದ ಎಲುಬುಗಳನ್ನು ಮುರಿದು ಮೂಟೆ ಕಟ್ಟಿ ಆ ಮೂಟೆಯನ್ನು ಬಿದಿರಿನ ಕಂಬಕ್ಕೆ ಕಟ್ಟಿ 2 ಕಿ.,ಮೀ ದೂರದಲ್ಲಿರುವ ರೈಲು ನಿಲ್ದಾಣಕ್ಕೆ ಹೊತ್ತೊಯ್ದಿದ್ದಾರೆ. ಅಲ್ಲಿಂದ ರೈಲಿನ ಗೂಡ್ಸ್ ಬೋಗಿಯಲ್ಲಿ ಮೃತದೇಹವನ್ನು ಸಾಗಿಸಲಾಗಿದೆ.

ನನ್ನ ಅಮ್ಮನನ್ನು ತುಂಡು ತುಂಡು ಮಾಡಿ ಅವರು ತೆಗೆದುಕೊಂಡು ಬಂದರು. ನನಗೇನೂ ಮಾಡಲು ಸಾಧ್ಯವಾಗಲಿಲ್ಲ. ನನಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಲ್ಲಿದ್ದೇನೆ ಎಂದು ಸಲಾಮನಿ ಅವರ ಪುತ್ರ ರಬೀಂದ್ರ ಬಾರಿಕ್ ಹೇಳಿದ್ದಾರೆ.

ಈ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡುವಂತೆ ಒಡಿಶಾ ಮಾನವ ಹಕ್ಕುಗಳ ಆಯೋಗವು ರೈಲ್ವೇ ಪೊಲೀಸರಿಗೆ ಮತ್ತು ಬಲಾಸೋರ್ ಜಿಲ್ಲೆಯ ಅಧಿಕಾರಿಗಳಿಗೆ ಆದೇಶಿಸಿದೆ.

ADVERTISEMENT

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.