ADVERTISEMENT

ಇಸ್ರೊ ರಾಕೆಟ್ 'ಬಾಹುಬಲಿ'ಯ ಸೆಲ್ಫಿ ವಿಡಿಯೊ

​ಪ್ರಜಾವಾಣಿ ವಾರ್ತೆ
Published 7 ಜೂನ್ 2017, 10:19 IST
Last Updated 7 ಜೂನ್ 2017, 10:19 IST
ಕೃಪೆ: ಇಸ್ರೊ
ಕೃಪೆ: ಇಸ್ರೊ   

ಚೆನ್ನೈ:  ಜಿಸ್ಯಾಟ್‌ 19 ಉಪಗ್ರಹವನ್ನು ಬಾಹ್ಯಾಕಾಶ ಕಕ್ಷೆಗೆ ಸೇರಿಸಿರುವ ದೇಶದ ಅತ್ಯಂತ ಭಾರದ ರಾಕೆಟ್ ಜಿಎಸ್‌ಎಲ್‌ವಿ ಮಾರ್ಕ್‌–IIIರ ಪ್ರತಿ ಹಂತವೂ ಸೆಲ್ಫಿ ವಿಡಿಯೋದಲ್ಲಿ ದಾಖಲಾಗಿದೆ.

ಗರಿಷ್ಠ ನಾಲ್ಕು ಟನ್‌ಗಳಷ್ಟು ಭಾರದ ಉಪಗ್ರಹಗಳನ್ನು ಹೊತ್ತುಕೊಂಡು ನಭಕ್ಕೆ ಚಿಮ್ಮಬಲ್ಲ ಸಾಮರ್ಥ್ಯವಿರುವ ಈ ರಾಕೆಟ್‌, 3,136 ಕೆಜಿ ತೂಕದ ಜಿಸ್ಯಾಟ್‌–19 ಉಪಗ್ರಹವನ್ನು ಸೋಮವಾರ ಭೂಸ್ಥಿರ ಕಕ್ಷೆಗೆ ಸೇರಿಸಿತು.

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದ 2ನೇ ಉಡಾವಣಾ ಕಟ್ಟೆಯಿಂದ (ಲಾಂಚ್‌ ಪ್ಯಾಡ್‌) ಆಗಸಕ್ಕೆ ನೆಗೆದ ರಾಕೆಟ್‌, 16 ನಿಮಿಷಗಳಲ್ಲಿ ಉಪಗ್ರಹವನ್ನು ನಿಗದಿತ ಕಕ್ಷೆಯಲ್ಲಿ ಇರಿಸಿತು.

ADVERTISEMENT

ರಾಕೆಟ್‌ಗೆ ಅಳವಡಿಸಲಾಗಿದ್ದ ಅಧಿಕ ಸಾಮರ್ಥ್ಯದ ಕ್ಯಾಮೆರಾ ಪ್ರತಿ ಹಂತವನ್ನು ಚಿತ್ರೀಕರಿಸಿಕೊಂಡಿದೆ. ಕಪ್ಪು ಬಿಳುಪು ಚಿತ್ರಗಳಲ್ಲಿ ಈ ವಿಡಿಯೊ ಮೂಡಿ ಬಂದಿದೆ.

ಎಸ್‌ಎಲ್‌ವಿ ಮಾರ್ಕ್‌ III ಯಶಸ್ವಿ ಉಡಾವಣೆಯಿಂದ ಖುಷಿಯಲ್ಲಿ ತೇಲುತ್ತಿದ್ದ ಇಸ್ರೊ ವಿಜ್ಞಾನಿಗಳು, ಆ ದೈತ್ಯ ರಾಕೆಟ್‌ ಅನ್ನು ‘ಬಾಹುಬಲಿ’ ಮತ್ತು ‘ವಿಧೇಯ  ಹುಡುಗ’ ಎಂಬ ಅಡ್ಡ ಹೆಸರುಗಳಿಂದ ಕರೆದು ಸಂಭ್ರಮಿಸಿದ್ದರು.

[related]

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.