ADVERTISEMENT

ಇಸ್ರೊ: 12ಕ್ಕೆ ಪಥದರ್ಶಕ ಉಪಗ್ರಹ ಉಡಾವಣೆ

ಪಿಟಿಐ
Published 7 ಏಪ್ರಿಲ್ 2018, 19:45 IST
Last Updated 7 ಏಪ್ರಿಲ್ 2018, 19:45 IST

ಚೆನ್ನೈ: ಜಿಸ್ಯಾಟ್–6ಎ ಉಪಗ್ರಹದ ಹಿನ್ನಡೆಯ ನಡುವೆಯೇ, ಭಾರತೀಯ ಪ್ರಾದೇಶಿಕ ಸಂಚಾರ ನಿರ್ವಹಣಾ ವ್ಯವಸ್ಥೆಯ ಮತ್ತೊಂದು ಉಪಗ್ರಹವನ್ನು (ಐಆರ್‌ಎನ್‌ಎಸ್‌ಎಸ್‌) ಇಸ್ರೊ, ಏಪ್ರಿಲ್ 12ರಂದು ಉಡಾವಣೆ ಮಾಡಲಿದೆ.

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 4 ಗಂಟೆಗೆ ಪಥದರ್ಶಕ ಉಪಗ್ರಹಗಳ ಸರಣಿಯ ಎಂಟನೇ ಉಪಗ್ರಹ ಐಆರ್‌ಎನ್‌ಎಸ್‌ಎಸ್‌–1ಎಲ್ ಉಡಾವಣೆಯಾಗಲಿದೆ. ಪಿಎಸ್ಎಲ್‌ವಿ ಸಿ–41 ರಾಕೆಟ್ ಇದನ್ನು ಹೊತ್ತೊಯ್ಯಲಿದೆ.

ಈ ಬಾರಿಯ ಉಡಾವಣೆ ಇಸ್ರೊಗೆ ಮಹತ್ವದ್ದು. ಕಳೆದ ಆಗಸ್ಟ್‌ನಲ್ಲಿ ಉಡಾವಣೆ ಮಾಡಿದ್ದ ಐಆರ್‌ಎನ್‌ಎಸ್‌ಎಸ್–1ಎಚ್ ಉಪಗ್ರಹವು ವಿಫಲವಾಗಿತ್ತು.

ADVERTISEMENT

ಸರಣಿಯ ಏಳು ಉಪಗ್ರಹಗಳ ಪೈಕಿ ಮೊದಲಿಗೆ ಹಾರಿಬಿಟ್ಟಿದ್ದ ಐಆರ್‌ಎನ್‌ಎಸ್‌ಎಸ್–1ಎ ಉಪಗ್ರಹದ ಬದಲಾಗಿ ಇದು ಕೆಲಸ ಮಾಡುವ ನಿರೀಕ್ಷೆಯಿದೆ.

10 ದಿನಗಳ ಹಿಂದೆಯಷ್ಟೇ ಕಕ್ಷೆಗೆ ಕಳುಹಿಸಿದ್ದ ಜಿಸ್ಯಾಟ್–6ಎ ಉಪಗ್ರಹ ನಿಯಂತ್ರಣ ಕಳೆದುಕೊಂಡಿದ್ದು, ಅದನ್ನು ಸರಿಪಡಿಸಲು ವಿಜ್ಞಾನಿಗಳು ಹಗಲಿರುಳೂ ಶ್ರಮಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.