ADVERTISEMENT

ಉತ್ತರಭಾರತ, ಸಿಕ್ಕಿಂ ಭೂಕಂಪ: ಮೃತರ ಸಂಖ್ಯೆ 66ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 8:05 IST
Last Updated 19 ಸೆಪ್ಟೆಂಬರ್ 2011, 8:05 IST

ನವದೆಹಲಿ (ಐಎನ್ಎಸ್): ದೇಶದ ಉತ್ತರ ಮತ್ತು ಈಶಾನ್ಯ ಭಾಗದಲ್ಲಿ ಭಾನುವಾರ ಸಂಜೆ ರಿಕ್ಟರ್‌ಮಾಪಕದಲ್ಲಿ 6.8ರಷ್ಟು ತೀವ್ರತೆಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಮೃತರಾದವರ ಸಂಖ್ಯೆ 66ಕ್ಕೆ ಏರಿದೆ. ಸಿಕ್ಕಿಂ ರಾಜ್ಯವೊಂದರಲ್ಲೇ ಸದ್ಯದವರೆಗೆ ಕನಿಷ್ಟ 39 ಜನರು ಮೃತರಾಗಿದ್ದಾರೆ, ನೂರಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

ಭೂಕಂಪದ ಅವಘಡದಲ್ಲಿ ಸಿಕ್ಕಿಂನಲ್ಲಿ ಇಬ್ಬರು ಸೈನಿಕರು ಸೇರಿದಂತೆ 16 ಜನರು,  ಬಿಹಾರದಲ್ಲಿ ಇಬ್ಬರು, ಪಶ್ಚಿಮ ಬಂಗಾಳದಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ಎಂದು ಗೃಹ ಸಚಿವಾಲಯದ ಕಾರ್ಯದರ್ಶಿ ಆರ್. ಕೆ. ಸಿಂಗ್ ಸೋಮವಾರ ತಿಳಿಸಿದ್ದಾರೆ.

ಪರಿಹಾರ ಘೋಷಣೆ: ಈ ಭೂಕಂಪದಲ್ಲಿ ಮಡಿದವರಿಗೆ ತಲಾ ರೂ. 2ಲಕ್ಷ. ತೀವ್ರವಾಗಿ ಗಾಯಗೊಂಡವರಿಗೆ ತಲಾ ರೂ. 1ಲಕ್ಷ ಪರಿಹಾರವನ್ನು ಪ್ರದಾನಮಂತ್ರಿ ಮನಮೋಹನ್ ಸಿಂಗ್ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.