ADVERTISEMENT

ಉತ್ತರಾಧಿಕಾರಿ ನೇಮಕ: ಮೇ 4 ರಂದು ಸಭೆ.

​ಪ್ರಜಾವಾಣಿ ವಾರ್ತೆ
Published 2 ಮೇ 2011, 19:30 IST
Last Updated 2 ಮೇ 2011, 19:30 IST

 ಹೈದರಾಬಾದ್:  ಪುಟ್ಟಪರ್ತಿಯ ಕುಲ್ವಂತ್ ಹಾಲ್‌ನಲ್ಲಿಯ ಸತ್ಯ ಸಾಯಿಬಾಬಾ ಸಮಾಧಿ ಸ್ಥಳದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಮೃತಶಿಲೆಯ ಮೂರ್ತಿ ಮತ್ತು  ಚಿನ್ನದ ಕವಚಕ್ಕೆ ತಗಲುವ ವೆಚ್ಚವನ್ನು ಭರಿಸಲು ಬಾಬಾ ಭಕ್ತ ಹಾಗೂ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಮುಂದಾಗಿದ್ದಾರೆ.
ಅಮೃತಶಿಲೆಯ ಮೂರ್ತಿ ನಿರ್ಮಾಣಕ್ಕೆ ತಗಲುವ ಅಂದಾಜು 30 ಲಕ್ಷ ರೂಪಾಯಿ ಮತ್ತು ಚಿನ್ನದ ಕವಚದ ವೆಚ್ಚವನ್ನು ಭರಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ.

ಈ ನಡುವೆ ಅನಿವಾಸಿ ಭಾರತೀಯರೊಬ್ಬರು ಸಂಪೂರ್ಣ ಚಿನ್ನದ ಸಾಯಿಬಾಬಾ ಮೂರ್ತಿಯನ್ನು ನಿರ್ಮಿಸಿಕೊಡಲು ಮುಂದೆ ಬಂದಿದ್ದಾರೆ. ಈ ಎರಡು ಪ್ರಸ್ತಾವಗಳು ಸತ್ಯಸಾಯಿ ಸೆಂಟ್ರಲ್ ಟ್ರಸ್ಟ್ ಮುಂದಿದ್ದು ಅಧಿಕೃತ ನಿರ್ಧಾರ ಹೊರಬೀಳಬೇಕಾಗಿದೆ. 

ಭಾನುವಾರ ಸಭೆ ಸೇರಿದ್ದ ಟ್ರಸ್ಟ್ ಸದಸ್ಯರು ಬಾಬಾ ಅವರ ಮೂರ್ತಿ ನಿರ್ಮಿಸುವ ವಿಷಯ ಕುರಿತು ಅಂತಿಮ ನಿರ್ಣಯಕ್ಕೆ ಬರಲು ವಿಫಲರಾಗಿದ್ದು ಈ ಕುರಿತು ಚರ್ಚಿಸಲು ಮೇ 8ರಂದು ಮತ್ತೆ ಸಭೆ ನಿಗದಿ ಮಾಡಿದ್ದಾರೆ.
ಬಾಬಾ ಉತ್ತರಾಧಿಕಾರಿ ನೇಮಕ, ಚೆಕ್ ಸಹಿ ಅಧಿಕಾರ, ಮೇ 4ರಂದು ಹಮ್ಮಿಕೊಂಡಿರುವ ಬಾಬಾ ಸ್ಮರಣಾರ್ಥ 10ನೇ ದಿನದ ಕಾರ್ಯಕ್ರಮದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.  ದೇಶ, ವಿದೇಶಗಳ ಹಲವು ಗಣ್ಯರು ಮೇ 4ರಂದು ನಡೆಯುವ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.


 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.