ಉನಾ, ಗುಜರಾತ್: 70ನೇ ಸ್ವಾತಂತ್ರ್ಯ ದಿನಾಚರಣೆಯಂದು ಗುಜರಾತ್‌ನ ಉನಾದಲ್ಲಿ ನಡೆಯುತ್ತಿರುವ ದಲಿತ ಮಹಾಸಮ್ಮೇಳನಕ್ಕೆ ಸಾಗರೋಪಾದಿಯಲ್ಲಿ ಜನ ಹರಿದುಬಂದಿದ್ದಾರೆ.
ರೋಹಿತ್ ವೇಮುಲ ಅವರ ತಾಯಿ ರಾಧಿಕಾ ವೇಮುಲ ರಾಷ್ಟ್ರಧ್ವಜ ಹಾರಿಸುವ ಮೂಲಕ ಈ ಬೃಹತ್ ದಲಿತ ಸಮಾವೇಶಕ್ಕೆ ಚಾಲನೆ ನೀಡಿದ್ದಾರೆ.
ದಲಿತರ ಮೇಲಿನ ದೌರ್ಜನ್ಯದಿಂದ ದೇಶದ ಗಮನ ಸೆಳೆದಿದ್ದ ಉನಾ ಈಗ ಹೊಸ ದಲಿತ ಚಳವಳಿಯ ಆರಂಭಕ್ಕೆ ಸಾಕ್ಷಿಯಾಗಿದೆ.
ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್, ರೋಹಿತ್ ವೇಮುಲ ಸೋದರ ಸೇರಿದಂತೆ ಸಾವಿರಾರು ಮಂದಿ ಯುವಕರು ಸಮಾವೇಶದಲ್ಲಿ ಭಾಗವಹಿಸಿದ್ದಾರೆ.
ಉನಾದಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಅಹಮದಾಬಾದ್‌ನಲ್ಲಿ ಆಗಸ್ಟ್ 4ರಂದು ಆರಂಭಗೊಂಡ ‘ದಲಿತ ಅಸ್ಮಿತಾ ಯಾತ್ರೆ’ ಸ್ವಾತಂತ್ರ್ಯ ದಿನಾಚರಣೆಯಂದು ಉನಾ ಸೇರಿದೆ.
‘ಉನಾ ಚಲೊ’ ಘೋಷಣೆಯೊಂದಿಗೆ ದಲಿತ ಅಸ್ಮಿತಾ ಯಾತ್ರೆ 10 ದಿನಗಳ ಕಾಲ ಹಲವು ಹಳ್ಳಿಗಳ ಮೂಲಕ ಹಾದು ಉನಾ ತಲುಪಿದೆ. ಸಮಾವೇಶದಲ್ಲಿ ನೆರೆದಿರುವ ಯುವಕರು ಅಂಬೇಡ್ಕರ್ ಭಾವಚಿತ್ರಗಳನ್ನು ಹಿಡಿದು ‘ಜೈ ಭೀಮ್, ಜೈ ಭೀಮ್’ ಎಂದು ಘೋಷಣೆ ಕೂಗುತ್ತಿದ್ದಾರೆ.
ಯಾತ್ರೆ ಮಾರ್ಗ ಮಧ್ಯೆ ಹಲ್ಲೆ
ದಲಿತ ಅಸ್ಮಿತಾ ಯಾತ್ರೆ ಸಾಗಿ ಬಂದ ಹಲವು ಹಳ್ಳಿಗಳಲ್ಲಿ ಗೋರಕ್ಷಕರು ಯಾತ್ರೆಯಲ್ಲಿ ಭಾಗವಹಿಸಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ.
ಆಗಸ್ಟ್ 13ರಂದು ಹೈದರಾಬಾದ್‌ನಿಂದ ರೈಲಿನಲ್ಲಿ ಹೊರಟ ರೋಹಿತ್ ವೇಮುಲ ತಾಯಿ ರಾಧಿಕಾ ಮತ್ತು ರೋಹಿತ್ ಸಹೋದರ ರಾಜ

ದಲಿತ ಮಹಾಸಮ್ಮೇಳನದ ವಿಡಿಯೊ

ಮುಸ್ಲಿಮರ ಬೆಂಬಲ
ದಲಿತ ಸಮಾವೇಶಕ್ಕೆ ದಲಿತರು ಮಾತ್ರವಲ್ಲದೆ ಹೆಚ್ಚಿನ ಸಂಖ್ಯೆಯ ಮುಸ್ಲಿಮರೂ ಸೇರಿದ್ದಾರೆ. ‘ಗುಜರಾತ್‌ನಲ್ಲಿ ಕೋಮುವಾದಕ್ಕೆ ವಿರುದ್ಧದ ದನಿ ಗಟ್ಟಿಗೊಳ್ಳುತ್ತಿದೆ’ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವಿಶ್ಲೇಷಿಸಿದ್ದಾರೆ.

ದಲಿತ ಮಹಾಸಮ್ಮೇಳನದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿರುವ ಸುದ್ದಿ ಹಾಗೂ ವಿಡಿಯೊ ಫೇಸ್‌ಬುಕ್ ಮೂಲಕ ವೈರಲ್ ಆಗಿದೆ. ಸಮ್ಮೇಳನದ ವಿಡಿಯೊಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನ ವೀಕ್ಷಿಸಿ, ಶೇರ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.