
ಪ್ರಜಾವಾಣಿ ವಾರ್ತೆ ಲಖನೌ/ ನವದೆಹಲಿ (ಪಿಟಿಐ): ಉತ್ತರ ಪ್ರದೇಶದಲ್ಲಿ ಅಖಿಲ ಭಾರತ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ (ಎಐಇಇಇ) ಪ್ರಶ್ನೆ ಪತ್ರಿಕೆಗಳು ಬಹಿರಂಗವಾದ ಪ್ರಕರಣದಲ್ಲಿ ಭಾಗಿಯಾಗಿದ್ದ ತಂಡವನ್ನು ಗುರುತಿಸಿರುವುದಾಗಿ ಉತ್ತರ ಪ್ರದೇಶದ ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಘಟನೆ ಸಂಬಂಧ ಕಾನ್ಪುರದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಿ ವಿಚಾರಣೆಗಾಗಿ ಲಖನೌಗೆ ಕರೆ ತರಲಾಗಿದ್ದು ಆತನ ಗುರುತನ್ನು ಬಹಿರಂಗಪಡಿಸಿಲ್ಲ. ಇತರ ಕನಿಷ್ಠ ನಾಲ್ಕು ಮಂದಿಯನ್ನು ಕೂಡ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಈ ತಂಡದ ಪ್ರಮುಖ ವ್ಯಕ್ತಿ ಮೂಲತಃ ಜೌನ್‌ಪುರ ಜಿಲ್ಲೆಯವನಾಗಿದ್ದು ಗಾಜಿಯಾಬಾದ್ ಮತ್ತು ಮುಂಬೈನಲ್ಲಿ ಬೇರೆ ಬೇರೆ ಹೆಸರಿನೊಂದಿಗೆ ನೆಲೆ ಕಂಡುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.