ADVERTISEMENT

ಎಡಪಕ್ಷಗಳ ಹೊರತು ಪರ್ಯಾಯ ರಾಜಕೀಯ ಶಕ್ತಿ ಅಸಾಧ್ಯ

ಸಿಪಿಎಂ ಮುಖಂಡ ಯೆಚೂರಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2013, 19:59 IST
Last Updated 16 ಜೂನ್ 2013, 19:59 IST

ಕೋಲ್ಕತ್ತ/ಚೆನ್ನೈ (ಪಿಟಿಐ): ದೇಶದಲ್ಲಿ ಎಡಪಕ್ಷಗಳನ್ನು ಹೊರತುಪಡಿಸಿ ಪರ್ಯಾಯ ರಾಜಕೀಯ ಶಕ್ತಿ ಅಸ್ತಿತ್ವಕ್ಕೆ ಬರಲು ಅಸಾಧ್ಯ ಎಂದಿರುವ ಸಿಪಿಎಂ ಪಾಲಿಟ್‌ಬ್ಯೂರೊ ಸದಸ್ಯ ಸೀತಾರಾಮ್ ಯೆಚೂರಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಉದ್ದೇಶಿತ ಒಕ್ಕೂಟ ವೇದಿಕೆ ರಚನೆ ವಿಚಾರವನ್ನು ತಳ್ಳಿ ಹಾಕಿದ್ದಾರೆ.

`ಸಾಮಾನ್ಯ ಕಾರ್ಯಕ್ರಮಗಳು ಮತ್ತು ಪರ್ಯಾಯ ನೀತಿಗಳ ಆಧಾರದ ಮೇಲೆ ಯಾವುದಾದರೂ ವೇದಿಕೆ ಅಥವಾ ರಂಗ ರಚಿಸಿದರೆ ಅದು ಯಶಸ್ವಿಯಾಗಬಹುದು. ಕೇವಲ ಘೋಷಣೆ ಮಾಡುವುದರಿಂದ ಒಕ್ಕೂಟ ವೇದಿಕೆ ರಚನೆಯಾಗುವುದಿಲ್ಲ' ಎಂದು ಭಾನುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಧರ್ಮ ಮತ್ತು ಜಾತಿ ಆಧಾರದ ಮೇಲೆ ರಾಜಕೀಯ ಪಕ್ಷಗಳು ಹಂಚಿ ಹೋಗಿರುವ ಹಿನ್ನೆಲೆಯಲ್ಲಿ ಪರ್ಯಾಯ ವೇದಿಕೆ ರಚನೆ ಸವಾಲಿನ ಕೆಲಸ ಎಂದು ಸಿಪಿಐಎಂ ಮುಖಂಡ ಬುದ್ಧದೇವ್ ಭಟ್ಟಾಚಾರ್ಯ ನೀಡಿರುವ ಹೇಳಿಕೆ ಬಗ್ಗೆ ಗಮನ ಸೆಳೆದಾಗ, `ಹೌದು, ಅವರ ಹೇಳಿಕೆ ವಾಸ್ತವಾಂಶದಿಂದ ಕೂಡಿದೆ' ಎಂದು ಚುಟುಕಾಗಿ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.