ADVERTISEMENT

ಎತ್ತರದ ದೇಗುಲ: 16ಕ್ಕೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 19:30 IST
Last Updated 7 ಮಾರ್ಚ್ 2014, 19:30 IST

ವೃಂದಾವನ (ಮಥುರಾ): ವಿಶ್ವದ ಲ್ಲಿಯೇ ಅತಿ ಎತ್ತರವಾದ  (212 ಮೀ) ಶ್ರೀಕೃಷ್ಣ ದೇವಾಲಯದ ಶಂಕು ಸ್ಥಾಪನೆ ಕಾರ್ಯ ಇಲ್ಲಿ ಮಾರ್ಚ್‌ 16ಕ್ಕೆ ನಡೆ­ಯ­ಲಿದೆ.

ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಹೋಳಿ ಹಬ್ಬದ ಉಡುಗೊರೆಯಾಗಿ ಶಿಲಾನ್ಯಾಸ ನೆರವೇರಿಸುತ್ತಾರೆ. ‘ವೃಂದಾವನ್‌ ಚಂದ್ರೋದಯ ಮಂದಿರ’ ಎಂದು ಕರೆಯಲಾಗುವ ದೇವ­ಸ್ಥಾನ ಸಂಕೀರ್ಣ ದೆಹಲಿ–ಆಗ್ರಾ ರಾಷ್ಟ್ರೀಯ ಹೆದ್ದಾರಿಯ ಛಾತಿಕರ ರಸ್ತೆಯಲ್ಲಿ 5.5 ಎಕರೆ ಜಾಗದಲ್ಲಿ ನಿರ್ಮಾಣವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.