ADVERTISEMENT

ಎನ್‌ಎಚ್‌ಆರ್‌ಸಿಗೆ ಮತ್ತೆ ಉನ್ನತ ಸ್ಥಾನ

​ಪ್ರಜಾವಾಣಿ ವಾರ್ತೆ
Published 10 ಜೂನ್ 2011, 19:30 IST
Last Updated 10 ಜೂನ್ 2011, 19:30 IST

ನವದೆಹಲಿ (ಪಿಟಿಐ): ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ಬಗ್ಗೆ ನಾಗರಿಕ ಸಂಘ ಸಂಸ್ಥೆಗಳು ನೀಡಿರುವ ದೂರನ್ನು ಬದಿಗಿರಿಸಿ, ಅಂತರ ರಾಷ್ಟ್ರೀಯ ಸಮಿತಿಯು ಆಯೋಗಕ್ಕೆ ಉನ್ನತ ಸ್ಥಾನವನ್ನೇ ಉಳಿಸಿಕೊಟ್ಟಿದೆ. 

ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳ ಅಂತರ ರಾಷ್ಟ್ರೀಯ ಸಮಿತಿಯು ಎನ್‌ಎಚ್‌ಆರ್‌ಸಿಗೆ `ಎ~ ಶ್ರೇಣಿಯನ್ನು ನೀಡಿದೆ. ಇತ್ತೀಚೆಗೆ ಜಿನೀವಾದಲ್ಲಿ ನಡೆದಿದ್ದ ಸಮಿತಿಯ ಸಭೆಯಲ್ಲಿ, ಭಾರತ ಅಲ್ಲದೆ ಇತರ ದೇಶಗಳ ಸೇವೆಯನ್ನೂ ಈ ಶ್ರೇಣಿಗಾಗಿ ಪರಾಮರ್ಶಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.