ಪಟ್ನಾ (ಪಿಟಿಐ/ಐಎಎನ್‌ಎಸ್): ಎನ್‌ಡಿಎ ಮೈತ್ರಿ ಕೂಟದಿಂದ ಹೊರಬರಲು ಪಕ್ಷದ ಸಭೆಯಲ್ಲಿ ನಿರ್ಧರಿಸಲಾಗಿದ್ದು ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ ಎಂದು ಜೆಡಿಯುನ ಹಿರಿಯ ನಾಯಕ ಶಿವಾನಂದ ತಿವಾರಿ ಶನಿವಾರ ತಿಳಿಸಿದ್ದಾರೆ.
ಇಂದು ನಡೆದ ಪಕ್ಷದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತಿವಾರಿ, ನರೇಂದ್ರ ಮೋದಿ ಅಹಂಕಾರದ ಮನುಷ್ಯ ಮತ್ತು ಇಬ್ಬಗೆ ನೀತಿಯ ವ್ಯಕ್ತಿತ್ವದವರು ಎಂದು ಟೀಕಿಸಿದರು.
ನರೇಂದ್ರ ಮೋದಿ ಅವರ ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿಯವರೇ ನಮ್ಮನ್ನು ಬಲವಂತಾಗಿ ಮೈತ್ರಿ ಕೂಟದಿಂದ ಹೊರಹಾಕಿದರು ಎಂದು ತಿವಾರಿ ಇದೇ ಸಂದರ್ಭದಲ್ಲಿ ಅಪಾದಿಸಿದರು.
ಎನ್‌ಡಿಎ ಮೈತ್ರಿ ಕೂಟದಲ್ಲಿ ಮುಂದುವರೆಯುವುದು ಕಷ್ಟ ಸಾಧ್ಯ. ಈಗಾಗಲೇ ಪರಿಸ್ಥಿತಿ ಕೈಮೀರಿ ಹೋಗಿದೆ ಎಂದು ಜೆಡಿಯು ವರಿಷ್ಠ ಶರದ್ ಯಾದವ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.