ADVERTISEMENT

ಎರಡನೇ ಮಹಾಯುದ್ಧ ಕಾಲದ ಬಾಂಬ್ ನಿಷ್ಕ್ರಿಯ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2011, 19:30 IST
Last Updated 30 ಅಕ್ಟೋಬರ್ 2011, 19:30 IST

ಮುಂಬೈ (ಪಿಟಿಐ): ಇಲ್ಲಿನ ಸಮುದ್ರದ ದಡದಲ್ಲಿ ಹತ್ತು ದಿನಗಳ ಹಿಂದೆ ಹೂಳೆತ್ತುವ ಸಂದರ್ಭದಲ್ಲಿ ದೊರೆತಿದ್ದ, ಎರಡನೇ ಜಾಗತಿಕ ಮಹಾಯುದ್ಧದ ಕಾಲದ ಫಿರಂಗಿ ಗುಂಡನ್ನು ಭಾನುವಾರ ರಾಯಗಡ ಜಿಲ್ಲೆಯ ಕಾರಂಜಾ ನೌಕಾನೆಲೆಯಲ್ಲಿ ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಲಾಯಿತು.

ಸುಮಾರು 45 ಕೆ.ಜಿ ಸ್ಫೋಟಕವನ್ನು ಹೊಂದಿದ್ದ ಈ ಗುಂಡನ್ನು ನಿಷ್ಕ್ರಿಯಗೊಳಿಸುವ ತಜ್ಞರು ಪೊಲೀಸ್ ಇಲಾಖೆಯಲ್ಲಿ ಇಲ್ಲದ ಕಾರಣ ಮುಂಬೈ ಬಂದರು ಕಚೇರಿಯ ಆವರಣದಲ್ಲಿ ಅದನ್ನು ಇಡಲಾಗಿತ್ತು. ತಜ್ಞರು ಪರಿಶೀಲಿಸಿದ ನಂತರ ಅದನ್ನು ಕಾರಂಜಾ ನೌಕಾನೆಲೆಗೆ ಕಳುಹಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.