ADVERTISEMENT

ಎರಡು ವರ್ಷದಲ್ಲಿ ಸದಾನಂದ ಗೌಡ ಸಂಪತ್ತು ಶೇಕಡ 42ರಷ್ಟು ಹೆಚ್ಚಳ

ಏಜೆನ್ಸೀಸ್
Published 13 ಸೆಪ್ಟೆಂಬರ್ 2017, 10:01 IST
Last Updated 13 ಸೆಪ್ಟೆಂಬರ್ 2017, 10:01 IST
ಸದಾನಂದ ಗೌಡ (ಸಂಗ್ರಹ ಚಿತ್ರ)
ಸದಾನಂದ ಗೌಡ (ಸಂಗ್ರಹ ಚಿತ್ರ)   

ನವದೆಹಲಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಾಂಖ್ಯಿಕ ಮತ್ತು ಯೋಜನಾನುಷ್ಠಾನ ಸಚಿವ ಸದಾನಂದ ಗೌಡ ಅವರ ಸಂಪತ್ತಿನ ಪ್ರಮಾಣದಲ್ಲಿ ಶೇಕಡ 42.3ರಷ್ಟು ಹೆಚ್ಚಾಗಿರುವುದು ತಿಳಿದುಬಂದಿದೆ. 2015ರಲ್ಲಿ ಅವರ ಬಳಿ ಇದ್ದ ಸಂಪತ್ತಿನ ಮೌಲ್ಯ ₹ 4.65 ಕೋಟಿ ಇದ್ದರೆ, 2017ರಲ್ಲಿ ಅದು ₹ 6.62 ಕೋಟಿ ಆಗಿದೆ.

2015–17ರ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಸಂಪತ್ತಿನ ಪ್ರಮಾಣದಲ್ಲಿ ಗರಿಷ್ಠ ಹೆಚ್ಚಳ ಕಂಡುಬಂದಿದ್ದರೆ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಸಂಪತ್ತಿನ ಪ್ರಮಾಣ ಇಳಿಕೆಯಾಗಿದೆ.

ತೋಮರ್ ಅವರ ಸಂಪತ್ತಿನ ಪ್ರಮಾಣ ಶೇಕಡ 67.5ರಷ್ಟು ಏರಿಕೆಯಾಗಿದೆ. ಅಂದರೆ, 2014–15ನೇ ಹಣಕಾಸು ವರ್ಷದಲ್ಲಿ ₹ 53 ಲಕ್ಷ ಇದ್ದುದು 2016–17ನೇ ಸಾಲಿನಲ್ಲಿ ₹ 89 ಲಕ್ಷ ಆಗಿದೆ. ಜಾವಡೇಕರ್ ಸಂಪತ್ತಿನ ಪ್ರಮಾಣದಲ್ಲಿ ಶೇಕಡ 50ರಷ್ಟು ಇಳಿಕೆಯಾಗಿದ್ದು, ₹ 1.11 ಕೋಟಿಯಿಂದ ₹ 56 ಲಕ್ಷಕ್ಕೆ ಇಳಿಕೆಯಾಗಿದೆ ಎಂದು ಪ್ರಧಾನಿ ಕಾರ್ಯಾಲಯದ ವೆಬ್‌ಸೈಟ್‌ನ ಅಂಕಿಅಂಶಗಳನ್ನು ಉಲ್ಲೇಖಿಸಿ ಫಸ್ಟ್‌ಪೋಸ್ಟ್ ವರದಿ ಮಾಡಿದೆ.

ADVERTISEMENT

ಮೋದಿ ಸೊತ್ತು ಹೆಚ್ಚಳ: ಪ್ರಧಾನಿ ನರೇಂದ್ರ ಮೋದಿಯವರ ನಿವ್ವಳ ಸ್ವತ್ತಿನ ಪ್ರಮಾಣ ಶೇಕಡ 41.8ರಷ್ಟು ಹೆಚ್ಚಳವಾಗಿದೆ (₹ 1.41 ಕೋಟಿಯಿಂದ ₹ 2 ಕೋಟಿ). ಜಾವಡೇಕರ್ ಹೊರತುಪಡಿಸಿ, ರಾಮ್‌ ವಿಲಾಸ್ ಪಾಸ್ವಾನ್ (30.8%), ಜೆಪಿ ನಡ್ಡಾ (14.6%) ಮತ್ತು ಅರುಣ್ ಜೇಟ್ಲಿ (4.3%)ಸಂಪತ್ತಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೆ, ಈ ಐವರು ಸಚಿವರ ಪತ್ನಿಯರ ನಿವ್ವಳ ಸೊತ್ತಿನ ಪ್ರಮಾಣ ಸಚಿವರ ಸೊತ್ತಿನ ಪ್ರಮಾಣಕ್ಕಿಂತ ಹೆಚ್ಚಿದೆ.

ಸಚಿವರ ಹೆಸರು – ಹೆಚ್ಚಾದ ಸಂಪತ್ತಿನ ಪ್ರಮಾಣ

ನರೇಂದ್ರ ಸಿಂಗ್ ತೋಮರ್ – 67.5% (₹ 53 ಲಕ್ಷದಿಂದ ₹ 89 ಲಕ್ಷ)
ಸದಾನಂದ ಗೌಡ – 42.3% (₹ 4.65 ಕೋಟಿಯಿಂದ ₹ 6.62 ಕೋಟಿ)
ನರೇಂದ್ರ ಮೋದಿ – 41.8% (₹ 1.41 ಕೋಟಿಯಿಂದ ₹ 2 ಕೋಟಿ)
ಚೌಧರಿ ಬೀರೇಂದರ್‌ ಸಿಂಗ್ –  23.5% (₹ 7.97 ಕೋಟಿಯಿಂದ ₹ 9.85 ಕೋಟಿ)
ಸುಷ್ಮಾ ಸ್ವರಾಜ್ – 17.4% (₹ 4.55 ಕೋಟಿಯಿಂದ ₹ 5.34 ಕೋಟಿ)
ವಿ.ಕೆ.ಸಿಂಗ್ – 12.5% (₹ 69 ಲಕ್ಷದಿಂದ ₹78 ಲಕ್ಷ)
ಅಶೋಕ್ ಗಜಪತಿ ರಾಜು – 11.7% (₹ 6.98 ಕೋಟಿಯಿಂದ ₹ 7.80 ಕೋಟಿ)
ಮುಖ್ತಾರ್ ಅಬ್ಬಾಸ್ ನಖ್ವಿ – 7.8% (₹ 99 ಲಕ್ಷದಿಂದ ₹ 1.07 ಕೋಟಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.