ADVERTISEMENT

ಏರ್ ಏಷ್ಯಾ ಗ್ರೂಪಿನ ಸಿಇಒ ಟೋನಿ ಫರ್ನಾಂಡಿಸ್ ಮೇಲೆ ಎಫ್ಐಆರ್ ದಾಖಲಿಸಿದ ಸಿಬಿಐ

ಪಿಟಿಐ
Published 29 ಮೇ 2018, 14:44 IST
Last Updated 29 ಮೇ 2018, 14:44 IST
ಏರ್ ಏಷ್ಯಾ ಗ್ರೂಪಿನ ಸಿಇಒ ಟೋನಿ ಫರ್ನಾಂಡಿಸ್ ಮೇಲೆ ಎಫ್ಐಆರ್ ದಾಖಲಿಸಿದ ಸಿಬಿಐ
ಏರ್ ಏಷ್ಯಾ ಗ್ರೂಪಿನ ಸಿಇಒ ಟೋನಿ ಫರ್ನಾಂಡಿಸ್ ಮೇಲೆ ಎಫ್ಐಆರ್ ದಾಖಲಿಸಿದ ಸಿಬಿಐ   

ನವದೆಹಲಿ: ಅಂತರರಾಷ್ಟ್ರೀಯ ವಿಮಾನ ಹಾರಾಟ ಪರವಾನಿಗೆ ನಿಯಮ ಉಲ್ಲಂಘನೆ ಆರೋಪದಡಿ ಏರ್ ಏಷ್ಯಾ ಗ್ರೂಪಿನ ಸಿಇಒ ಟೋನಿ ಫರ್ನಾಂಡಿಸ್ ಸೇರಿದಂತೆ ಇತರರ ಮೇಲೆ ಸಿಬಿಐ ಆರೋಪ ಪಟ್ಟಿ ದಾಖಲಿಸಿದೆ.

ವಿದೇಶಿ ಹೂಡಿಕೆ ಪ್ರೋತ್ಸಾಹ ಸಮಿತಿ ಹಾಗೂ ಅಂತರರಾಷ್ಟ್ರೀಯ ವಿಮಾನ ಹಾರಾಟ ಪರವಾನಿಗೆಯ 5/20 ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಆದ ಕಾರಣ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪ ಪಟ್ಟಿಯಲ್ಲಿ ಏರ್ ಏಷ್ಯಾ ಗ್ರೂಪಿನ ಸಿಇಒ ಟೋನಿ ಫರ್ನಾಂಡಿಸ್, ಟ್ರಾವ್ಲದ ಫುಡ್ ಮಾಲೀಕ ಸುನೀಲ್ ಕಪೂರ್, ಏರ್ ಏಷ್ಯಾ ನಿರ್ದೇಶಕ ಆರ್. ವೆಂಕಟರಾಮನ್, ವಿಮಾನಯಾನ ಸಂಪರ್ಕಾಧಿಕಾರಿ ದೀಪಕ್ ತಲ್ವಾರ್, ಸಿಂಗಪುರ ಮೂಲದ ಎಸ್‌ಎನ್‌ಆರ್ ಟ್ರೆಂಡಿಂಗ್‌ನ ರಾಜೇಂದ್ರ ದುಬೇ, ಅಪರಿಚಿತ ಸಾರ್ವಜನಿಕ ಸೇವಾಧಿಕಾರ ಹೆಸರುಗಳು ಇವೆ. ಬೆಂಗಳೂರು, ಮುಂಬೈ, ದೆಹಲಿಯಲ್ಲಿ ಿವರುಗಳಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಹೇಳಿದ್ದಾರೆ.

ADVERTISEMENT

ಫರ್ನಾಂಡಿಸ್ ಅವರು, ವಿಮಾನಯಾನದ 5/20 ನಿಯಮಗಳನ್ನು ತೊಡೆದುಹಾಕಲು ಹಾಗೂ ಮಾರ್ಗದರ್ಶಿ ಸೂತ್ರಗಳಲ್ಲಿ ಬದಲಾವಣೆ ತರಲು ಯತ್ನಿಸಿದ್ದರು ಎಂಬ ಆರೋಪ ಹೊತ್ತಿದ್ದಾರೆ.

ಏನಿದು 5/20 ನಿಯಮ?

ಈ ನಿಯಮದ ಪ್ರಕಾರ ಅಂತರರಾಷ್ಟ್ರೀಯ ವಿಮಾನ ಹಾರಾಟ ಪರವಾನಿಗೆ ಪಡೆಯಲು ಐದು ವರ್ಷ ಅನುಭವವಿರಬೇಕು ಹಾಗೂ 20 ವಿಮಾನಗಳ ಪರವಾನಿಗೆ ಪಡೆಯುವ ಅರ್ಹತೆಯನ್ನು ಹೊಂದಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.