ADVERTISEMENT

ಐ.ಎಸ್‌ ಜೊತೆ ಸಂಪರ್ಕ: ಬಂಧನ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 19:30 IST
Last Updated 25 ಅಕ್ಟೋಬರ್ 2017, 19:30 IST

ತಿರುವನಂತಪುರ/ಕಣ್ಣೂರು: ಇಸ್ಲಾಮಿಕ್ ಸ್ಟೇಟ್ (ಐ.ಎಸ್) ಉಗ್ರ ಸಂಘಟನೆಯ ಜೊತೆ ಸಂಪರ್ಕ ಹೊಂದಿದ್ದಾರೆ ಎನ್ನಲಾದ ಮೂವರನ್ನು ಕಣ್ಣೂರಿನಲ್ಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಕಣ್ಣೂರಿನ ಚಕ್ಕರಕ್ಕಲ್‌ನ ರಶೀದ್, ರಜಾಕ್ ಮತ್ತು ಮಿಥಿಲಜ್ ಎಂಬುವವರು ಬಂಧಿತರು. ಇವರು ಟರ್ಕಿ ಮೂಲಕ ಸಿರಿಯಾವನ್ನು ಪ್ರವೇಶಿ
ಸಲು ಯತ್ನಿಸುತ್ತಿದ್ದ ವೇಳೆ ಟರ್ಕಿಯ ಪೊಲೀಸರು ತಡೆದಿದ್ದು, ಭಾರತಕ್ಕೆ ಗಡಿಪಾರು ಮಾಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಐ.ಎಸ್‌ನ ಒಮರ್ ಅಲ್ ಹಿಂದ್ ಘಟಕದಲ್ಲಿ ಭಾಗಿಯಾಗಿದ್ದ ಆರು ಮಂದಿಯನ್ನು ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಂಧಿಸಿತ್ತು. ಇವರು ಸ್ಫೋಟಕಗಳನ್ನು ಸಂಗ್ರಹಿಸಿ ಗಣ್ಯ ವ್ಯಕ್ತಿಗಳು ಮತ್ತು ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸುವ ಸಂಚು ರೂಪಿಸಿದ್ದರು ಎಂದು ಆರೋಪಪಟ್ಟಿಯಲ್ಲಿ ಎನ್‌ಐಎ ತಿಳಿಸಿದೆ.

ADVERTISEMENT

ಎನ್‌ಐಎ ವಶಕ್ಕೆ:‌ ಟರ್ಕಿಯಿಂದ ಭಾರತಕ್ಕೆ ಗಡಿಪಾರಾದ ಶಹಜಹಾನ್ ವೆಲ್ಲುವಕಂಡಿ (32) ಎಂಬಾತನನ್ನು ಎನ್‌ಐಎ ಐದು ದಿನಗಳ ಮಟ್ಟಿಗೆ ವಶಕ್ಕೆ ಪಡೆದಿದೆ. ಜುಲೈ 1ರಂದು ಈತನನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.