ನವದೆಹಲಿ:ಭೂಮಿಯಿಂದ ಹೊರ ತೆಗೆದಿರುವ ಅದಿರಿನ ಪ್ರಮಾಣ ಕುರಿತು ವಿವರ ಒದಗಿಸುವಂತೆ ಸುಪ್ರೀಂ ಕೋರ್ಟ್ ‘ಒಬಳಾಪುರಂ ಗಣಿ ಕಂಪೆನಿ’ (ಒಎಂಸಿ) ಗೆ ಸೋಮವಾರ ಸೂಚನೆ ನೀಡಿದೆ.
ಮಳೆಗಾಲ ಸಮೀಪಿಸುತ್ತಿದ್ದು ಅದಿರು ಹಾಳಾಗುವ ಹಿನ್ನೆಲೆಯಲ್ಲಿ ರಫ್ತಿಗೆ ಅನುಮತಿ ನೀಡುವಂತೆ ಒಎಂಸಿ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಎಸ್. ಎಚ್. ಕಪಾಡಿಯಾ ನೇತೃತ್ವದ ‘ಹಸಿರು ಪೀಠ’ ಈ ಸೂಚನೆ ನೀಡಿದೆ. ಅಲ್ಲದೆ, ಮಳೆಯಿಂದ ಅದಿರು ಹಾಳಾಗುವುದೇ ಎಂಬ ಬಗ್ಗೆ ಪ್ರಮಾಣ ಪತ್ರ ಸಲ್ಲಿಸುವಂತೆ ಆಂಧ್ರ ಸರ್ಕಾರಕ್ಕೆ ಕೇಳಿದೆ.
ತೆರಿಗೆ ಬಾಕಿ ಪಾವತಿಸಲು ಅದಿರು ರಫ್ತಿಗೆ ಅನುಮತಿ ನೀಡುವಂತೆ ಒಎಂಸಿ ಮಾಡಿದ ಮನವಿಯನ್ನು ಆಂಧ್ರ ಸರ್ಕಾರ ವಿರೋಧಿಸಿದ ಬಳಿಕ ನ್ಯಾ. ಅಫ್ತಾಬ್ ಆಲಂ ಮತ್ತು ನ್ಯಾ. ಕೆ.ಎಸ್. ರಾಧಾಕೃಷ್ಣನ್ ಅವರನ್ನು ಒಳಗೊಂಡ ಪೀಠ ಈ ಸೂಚನೆ ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.