ADVERTISEMENT

ಓಲಾ, ಉಬರ್ ಮುಷ್ಕರ: ಪರದಾಟ

ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 19:30 IST
Last Updated 19 ಮಾರ್ಚ್ 2018, 19:30 IST

ಮುಂಬೈ: ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಓಲಾ ಹಾಗೂ ಉಬರ್‌ ಚಾಲಕರು ಸೋಮವಾರದಿಂದ ಆರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ವಾಣಿಜ್ಯ ನಗರಿ ಮುಂಬೈನಲ್ಲಿ ಲಕ್ಷಾಂತರ ಪ್ರಯಾಣಿಕರು ಪರದಾಡಬೇಕಾಯಿತು.

ಮಹಾರಾಷ್ಟ್ರದ ನವನಿರ್ಮಾಣ್‌ ವಹಾತುಕ್‌ ಸೇನೆ (ಎಂಎನ್‌ವಿಎಸ್‌) ಕರೆ ನೀಡಿರುವ ಮುಷ್ಕರದಿಂದ ದೆಹಲಿ, ಹೈದರಾಬಾದ್‌ಗಳಲ್ಲಿನ ಪ್ರಯಾಣಿಕರು ತೊಂದರೆ ಎದುರಿಸಬೇಕಾಯಿತು.

ಮುಷ್ಕರಕ್ಕೆ ಕರೆ ನೀಡಿದ್ದರೂ ನಗರದಲ್ಲಿ ಓಡಾಡುತ್ತಿದ್ದ ಟ್ಯಾಕ್ಸಿ ಯೊಂದರ ಗಾಜನ್ನು ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ (ಎಂಎನ್‌ಎಸ್‌)  ಮುಖಂಡನೊಬ್ಬ ಒಡೆದುಹಾಕಿದ್ದಾನೆ. 

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿದ ಓಲಾ ಕಂಪನಿಯ ವಕ್ತಾರರೊಬ್ಬರು, ‘ಕ್ಯಾಬ್‌ ಪ್ರಯಾಣಿಕರ ಸುರಕ್ಷತೆಗೆ ಎಲ್ಲ ರೀತಿಯ ಕ್ರಮ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ’ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.