ADVERTISEMENT

ಕತಾರ್‍‍ಗೆ ವಿಮಾನ ಪ್ರಯಾಣದ ಅವಧಿಯೂ ಹೆಚ್ಚಾಗಬಹುದು; ಪ್ರಯಾಣ ದರ ಏರಿಕೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2017, 11:45 IST
Last Updated 6 ಜೂನ್ 2017, 11:45 IST
ಕತಾರ್‍‍ಗೆ ವಿಮಾನ ಪ್ರಯಾಣದ ಅವಧಿಯೂ ಹೆಚ್ಚಾಗಬಹುದು; ಪ್ರಯಾಣ ದರ ಏರಿಕೆ ಸಾಧ್ಯತೆ
ಕತಾರ್‍‍ಗೆ ವಿಮಾನ ಪ್ರಯಾಣದ ಅವಧಿಯೂ ಹೆಚ್ಚಾಗಬಹುದು; ಪ್ರಯಾಣ ದರ ಏರಿಕೆ ಸಾಧ್ಯತೆ   

ನವದೆಹಲಿ: ಕತಾರ್ ಜತೆ ಅರಬ್ ರಾಷ್ಟ್ರಗಳು ಸಂಬಂಧ ಕಡಿದುಕೊಂಡ ಹಿನ್ನೆಲೆಯಲ್ಲಿ ಕತಾರ್‌ನಿಂದ ಭಾರತಕ್ಕೆ ಬರುವ ವಿಮಾನ ಪ್ರಯಾಣಗಳ ಬಗ್ಗೆ ಜನರಲ್ಲಿ ಆತಂಕ ಮೂಡಿದೆ. ಭಾರತದಿಂದ ಕತಾರ್‍‍ಗೆ ಹೋಗುವ ವಿಮಾನಗಳಿಗೆ ಯಾವುದೇ ಸಮಸ್ಯೆಯುಂಟಾಗಲ್ಲ ಎಂದು ಬಲ್ಲಮೂಲಗಳು ಹೇಳಿವೆ. ಆದರೆ ಯುಎಇ ಸೇರಿದಂತೆ ಇನ್ನಿತರ ಗಲ್ಫ್ ರಾಷ್ಟ್ರಗಳು ಈ ಬಗ್ಗೆ ಯಾವ ಕ್ರಮ ಅನುಸರಿಸುತ್ತವೆ ಎಂಬುದು ಸ್ಪಷ್ಟವಾಗಿಲ್ಲ. 

ಭಾರತ-ದೋಹಾ ವಿಮಾನಗಳು ಯುಎಇ ಮೂಲಕ ಸಂಚರಿಸಬೇಕಾದರೆ ಪೂರ್ವ ಅನುಮತಿ ಪಡೆಯಬೇಕಾಗುತ್ತದೆ ಎಂದು ಯುಎಇ ಅಧಿಕಾರಿಗಳು ಆದೇಶಿಸಿದ್ದಾರೆ ಎಂಬ ಸುದ್ದಿಗಳೂ ಕೇಳಿ ಬರುತ್ತಿವೆ. ಅನುಮತಿ ನೀಡಿದರೆ ವಿಮಾನ ಸಂಚಾರಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ. ಒಂದು ವೇಳೆ ಅನುಮತಿ ನಿರಾಕರಿಸಿದರೆ ಭಾರತದಿಂದ ಹೊರಡುವ ವಿಮಾನಗಳು ಯುಎಇ ಮೂಲಕ ಹಾದು ಹೋಗದೆ, ಇರಾನ್‍ಗೆ ಹೋಗಿ ಅಲ್ಲಿಂದ ಕತಾರ್‍‍ಗೆ ಪ್ರಯಾಣಿಸಬೇಕಾಗುತ್ತದೆ. ಈ ಪ್ರಯಾಣಕ್ಕೆ  ಅಧಿಕ ಸಮಯ ಬೇಕಾಗಿ ಬರುವುದರಿಂದ ಪ್ರಯಾಣದರವೂ ಹೆಚ್ಚಾಗಲಿದೆ. 

ಜೆಟ್ ಏರ್‍‍ವೇಸ್, ಏರ್ ಇಂಡಿಯಾ, ಇಂಡಿಗೊ ಮೊದಲಾದ ಭಾರತದ ವಿಮಾನಗಳು ಮತ್ತು ಕತಾರ್ ಏರ್‍‍ವೇಸ್  ಭಾರತದಿಂದ ಕತಾರ್‍‍ಗೆ ವಿಮಾನಯಾನ ನಡೆಸುತ್ತಿವೆ. ಈ ವಿಮಾನಸಂಸ್ಥೆಗಳ ವಿಮಾನಯಾನದ ಮೇಲೆ ಕತಾರ್- ಅರಬ್ ರಾಷ್ಟ್ರಗಳ ನಡುವಿನ ಸಂಬಂಧದಲ್ಲಿನ ಬಿರುಕು ಪರಿಣಾಮ ಬೀರಲಿದೆ. 

ADVERTISEMENT

ಆದಾಗ್ಯೂ, ದೆಹಲಿಯಿಂದ ಕತಾರ್‍‍‌ಗೆ ಹೋಗುವ ವಿಮಾನ ಯಾತ್ರೆಗಳಿಗೆ ಯಾವುದೇ ಸಮಸ್ಯೆಯುಂಟಾಗಲ್ಲ. ಯಾಕೆಂದರೆ ಇಲ್ಲಿಂದ ಹೊರಡುವ ವಿಮಾನಗಳು ಪಾಕಿಸ್ತಾನದ ಮೂಲಕ ಇರಾನ್‍ಗೆ ಹೋಗಿ ಅಲ್ಲಿಂದ ದೋಹಾಗೆ ಹೋಗುತ್ತವೆ.

ಭಾರತದಿಂದ ಕತಾರ್‍‍ಗೆ ಹೋಗಬೇಕಾದರೆ ವಿಮಾನದಲ್ಲಿ ಕನಿಷ್ಠ 2 ಗಂಟೆ ಬೇಕಾಗಬಹುದು. ಹೀಗೆ ಸುತ್ತಿ ಬಳಸಿ ಹೋಗುವುದರಿಂದ ಇಂಧನವೂ ಹೆಚ್ಚು ವ್ಯರ್ಥವಾಗುತ್ತದೆ. ಹಾಗಾಗಿ ಪ್ರಯಾಣ ದರ ಏರುವ ಸಾಧ್ಯತೆ ಇದೆ ಎಂದು ಭಾರತದ ವಿಮಾನ ಸಂಸ್ಥೆಯ ವಕ್ತಾರರು ಹೇಳಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಕತಾರ್ ಏರ್‍‍ವೇಸ್ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.