ADVERTISEMENT

‘ಕಲಬರಕೆ ಆಹಾರ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳಿ’

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 19:30 IST
Last Updated 4 ಅಕ್ಟೋಬರ್ 2017, 19:30 IST

ನವದೆಹಲಿ : ಹಬ್ಬಗಳ ಸಮಯದಲ್ಲಿ ಕಲಬರಕೆ ಆಹಾರ ಉತ್ಪನ್ನ ಹಾಗೂ ಕಡಿಮೆ ಗುಣಮಟ್ಟದ ಆಭರಣಗಳ ಮಾರಾಟ ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಗ್ರಾಹಕ ವ್ಯವಹಾರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ.

’ಹಬ್ಬಗಳ ವೇಳೆ ಅಗತ್ಯ ವಸ್ತುಗಳ ಬೆಲೆ ಸ್ಥಿರವಾಗಿ ಇರುತ್ತದಾದರೂ, ಕಲಬೆರಕೆ ಸಿಹಿ ತಿಂಡಿಗಳು ಹಾಗೂ ಇತರ ಆಹಾರ ಪದಾರ್ಥಗಳ ಮಾರಾಟ ಆರೋಗ್ಯಕ್ಕೆ ಹಾನಿಕಾರಕ. ಚಿನ್ನಾಭರಣಗಳ ಮೇಲೆ ’ಹಾಲ್‌ಮಾರ್ಕ್‌’ ಯೋಜನೆ ಜಾರಿಗೆ ತಂದಿರುವುದರ ನಡುವೆಯೂ ಕಳಪೆ ಗುಣಮಟ್ಟದ ಆಭರಣಗಳ ಮಾರಾಟ ನಡೆಯುತ್ತದೆ. ಆದ್ದರಿಂದ ಈ ವಿಷಯಗಳ ಬಗ್ಗೆ ಸರ್ಕಾರಗಳು ವಿಶೇಷ ಗಮನ ಹರಿಸಬೇಕು’ ಎಂದು ಸಚಿವರು ಪತ್ರದಲ್ಲಿ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT