ADVERTISEMENT

ಕಲ್ಲಿದ್ದಲು ಹಗರಣ ವಿಚಾರಣೆ: ಸಿಡಿಮಿಡಿಗೆ ವಾಹನ್ವತಿ ಕ್ಷಮೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 19:59 IST
Last Updated 25 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ  ಹಂಚಿಕೆ ಹಗರಣ ಕುರಿತು ಮಂಗಳವಾರ ನಡೆದ  ವಾದ ಮಂಡನೆ ವೇಳೆ ತಾಳ್ಮೆ ಕಳೆದುಕೊಂಡಿದ್ದಕ್ಕೆ  ಅಟಾರ್ನಿ  ಜನರಲ್‌ ಜಿ.ಇ.ವಾಹನ್ವತಿ ಅವರು ಸುಪ್ರೀಂ ಕೋರ್ಟ್‌ನ ಕ್ಷಮೆಯಾಚಿಸಿದ್ದಾರೆ.

‘ನ್ಯಾಯ ಪೀಠಕ್ಕೆ ಅಗೌರವ ತೋರಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನನ್ನ ವರ್ತನೆಗೆ ಕ್ಷಮೆ ಕೇಳುತ್ತೇನೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯ ಮೂರ್ತಿ ಆರ್‌..ಎಂ. ಲೋಧಾ ‘ಬಿಸಿಲ ಧಗೆ ಕಾರಣ ನೀವು ಹಾಗೆ ನಡೆದು ಕೊಂಡಿದ್ದಾಗಿ  ಭಾವಿಸಿದೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ವಾದ ಮಂಡನೆ ವೇಳೆ ಪೀಠದಿಂದ  ಪ್ರಶ್ನೆಗಳ ಸುರಿಮಳೆ ಎದುರಿಸಿದ ವಾಹ ನ್ವತಿ ‘ಎಲ್ಲವನ್ನೂ ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲ’ ಎಂದು ಉತ್ತರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.