ADVERTISEMENT

ಕಲ್ಲಿದ್ದಲು ಹಗರಣ: ಸಿಬಿಐನಿಂದ ಚಾರ್ಜ್ ಶೀಟ್ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 10:01 IST
Last Updated 10 ಮಾರ್ಚ್ 2014, 10:01 IST

ನವದೆಹಲಿ(ಪಿಟಿಐ): ಬಹುಕೋಟಿ ರೂಪಾಯಿ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮೊದಲ ಬಾರಿಗೆ ನವಭಾರತ್‌ ಪವರ್‌ ಪ್ರೈ ಲಿಮಿಟೆಡ್‌ ವಿರುದ್ಧ ದೆಹಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.

2006 ರಿಂದ 2009ರ ವರೆಗೆ ನಡೆದಿರುವ ಅವ್ಯವಹಾರ, ಸತ್ಯ ಮರೆಮಾಚುವಿಕೆ ಮತ್ತು ಕಲ್ಲಿದ್ದಲು ಹಂಚಿಕೆಯಲ್ಲಿನ ಅಕ್ರಮವನ್ನು ಪರಿಗಣಿಸಿ ನವಭಾರತ್ ಪವರ್ ಪ್ರೈವೆಟ್ ಲಿ. ಸಂಸ್ಥೆಯ ವಿರುದ್ಧ ಈ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

ಸಂಸ್ಥೆಯ ನಿರ್ದೇಶಕರಾದ ಪಿ. ತ್ರಿವಿಕ್ರಮ ಪ್ರಸಾದ್ ಮತ್ತು ವೈ. ಹರೀಶ್ ಚಂದ್ರ ಪ್ರಸಾದ್ ಅವರ ಹೆಸರನ್ನು ಜಾರ್ಜ್ ಶೀಟ್ ನಲ್ಲಿ ಪ್ರಸ್ತಾಪಿಸಲಾಗಿದೆ.

ಮೂಲಗಳ ಪ್ರಕಾರ ನವಭಾರತ್ ಸಂಸ್ಥೆ ಮತ್ತು ಇಬ್ಬರು ನಿರ್ದೇಶಕರ ವಿರುದ್ಧ ಐಪಿಸಿ ಸೆಕ್ಷನ್ 120ಬಿ ಮತ್ತು 420 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.