ಗುವಾಹಟಿ (ಪಿಟಿಐ): ಚುನಾವಣೆ ಪೂರ್ವ ಹಿಂಸಾಚಾರದಲ್ಲಿ ಅಪರಿಚಿತ ದುಷ್ಕರ್ಮಿಗಳು ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯ ಮೇಲೆ ಗ್ರೆನೇಡ್ ಎಸೆದಿದ್ದರಿಂದ ಪಕ್ಷದ ಪ್ರಧಾನ ಕಾರ್ಯದರ್ಶಿ ರಂಜನ್ ಬೋರಾ ಮತ್ತು ವಕ್ತಾರ ಮೆಹದಿ ಅಲಂ ಅವರು ಸೇರಿದಂತೆ ಐವರು ಗಾಯಗೊಂಡಿದ್ದಾರೆ.
ತರುಣ್ ನಗರ ಪ್ರದೇಶದಲ್ಲಿರುವ ರಾಜೀವ್ ಭವನದಲ್ಲಿ ಸಂಜೆ 6.30ಕ್ಕೆ ದುಷ್ಕರ್ಮಿಗಳು ಗ್ರೆನೇಡ್ ದಾಳಿ ನಡೆಸಿದ್ದರಿಂದ ಕಟ್ಟಡದ ಗೋಡೆ, ಕಿಟಕಿ ಮತ್ತು ಪೀಠೋಪಕರಣಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡವರನ್ನು ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.