ADVERTISEMENT

ಕಾನ್ರಾಡ್‌ ಸಂಗ್ಮಾ ಮೇಘಾಲಯ ಸಿ.ಎಂ

ಪಿಟಿಐ
Published 6 ಮಾರ್ಚ್ 2018, 19:30 IST
Last Updated 6 ಮಾರ್ಚ್ 2018, 19:30 IST
ಮೇಘಾಲಯದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂಗ್ಮಾ (ಬಲಬದಿ) ಅವರಿಗೆ ರಾಜ್ಯಪಾಲ ಗಂಗಾಪ್ರಸಾದ್‌ ಶುಭ ಕೋರಿದರು.
ಮೇಘಾಲಯದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂಗ್ಮಾ (ಬಲಬದಿ) ಅವರಿಗೆ ರಾಜ್ಯಪಾಲ ಗಂಗಾಪ್ರಸಾದ್‌ ಶುಭ ಕೋರಿದರು.   

ಶಿಲ್ಲಾಂಗ್‌: ನ್ಯಾಷನಲ್‌ ಪೀಪಲ್ಸ್‌ ಪಾರ್ಟಿಯ (ಎನ್‌ಪಿಪಿ) ಮುಖ್ಯಸ್ಥ ಕಾನ್ರಾಡ್‌ ಸಂಗ್ಮಾ ಅವರು ಮೇಘಾಲಯದ ಹೊಸ ಮುಖ್ಯಮಂತ್ರಿಯಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ.

ಸಂಗ್ಮಾ ಅವರೊಂದಿಗೆ 11 ಸಂಪುಟ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಗಂಗಾಪ್ರಸಾದ್‌ ಅವರು ಪ್ರಮಾಣ ವಚನ ಬೋಧಿಸಿದರು.

ಲೋಕಸಭೆಯ ಮಾಜಿ ಸ್ಪೀಕರ್‌ ಪಿ.ಎ. ಸಂಗ್ಮಾ ಅವರ ಮಗನಾದ 40 ವರ್ಷದ ಕಾನ್ರಾಡ್‌ ಸದ್ಯ ಲೋಕಸಭಾ ಸದಸ್ಯರಾಗಿದ್ದಾರೆ. 19 ಶಾಸಕರನ್ನು ಹೊಂದಿರುವ ಎನ್‌ಪಿಪಿ ನೇತೃತ್ವದ ಮೈತ್ರಿ ಸರ್ಕಾರಕ್ಕೆ ನಾಲ್ಕು ಪಕ್ಷಗಳು ಬೆಂಬಲ ನೀಡಿವೆ.

ADVERTISEMENT

ಆರು ಶಾಸಕರ ಸಂಯುಕ್ತ ಪ್ರಜಾಸತ್ತಾತ್ಮಕ ಪಕ್ಷ (ಯುಡಿಪಿ), ನಾಲ್ವರು ಶಾಸಕರ ಪೀಪಲ್ಸ್‌ ಡೆಮಾಕ್ರಟಿಕ್‌ ಫ್ರಂಟ್‌ (ಪಿಡಿಎಫ್‌) ತಲಾ ಇಬ್ಬರು ಶಾಸಕರನ್ನು ಹೊಂದಿರುವ ಬಿಜೆಪಿ ಮತ್ತು ಎಸ್‌ಎಸ್‌ಪಿಡಿಪಿ ಮತ್ತು ಒಬ್ಬ ಪಕ್ಷೇತರ ಶಾಸಕ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರು ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದರು.

ಆರಂಭದಲ್ಲಿಯೇ ಬಹಿಷ್ಕಾರದ ಬಿಸಿ: ಎನ್‌ಪಿಪಿ ಮೈತ್ರಿಕೂಟದ ಅಂಗಪಕ್ಷವಾಗಿರುವ ಎಸ್‌ಎಸ್‌ಪಿಡಿಪಿ ಪ್ರಮಾಣ ವಚನ ಸಮಾರಂಭವನ್ನು ಬಹಿಷ್ಕರಿಸಿತ್ತು.

ಸಂಗ್ಮಾ ಆಯ್ಕೆ ಏಕಪಕ್ಷೀಯ ಎಂದು ಎಸ್‌ಎಸ್‌ಪಿಡಿಪಿ ಆಕ್ಷೇಪ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ‘ಮೈತ್ರಿ ಸರ್ಕಾರ ಮುನ್ನಡೆಸುವುದು ಸುಲಭದ ಮಾತಲ್ಲ’ ಎಂದು ನೂತನ ಮುಖ್ಯಮಂತ್ರಿ ಸಂಗ್ಮಾ ಪ್ರತಿಕ್ರಿಯಿಸಿದ್ದಾರೆ.

21 ಸ್ಥಾನಗಳಲ್ಲಿ ಜಯಗಳಿಸಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಕಾಂಗ್ರೆಸ್‌ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.